Thursday, July 3, 2025
Homeಕರಾವಳಿದ.ಕ ಜಿ. ಪಂ ಮಾಜಿ ಸದಸ್ಯ ಸದಾನಂದ ಮಲ್ಲಿ ವಿಧಿವಶ!

ದ.ಕ ಜಿ. ಪಂ ಮಾಜಿ ಸದಸ್ಯ ಸದಾನಂದ ಮಲ್ಲಿ ವಿಧಿವಶ!

spot_img
- Advertisement -
- Advertisement -

ಬಂಟ್ವಾಳ :ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ , ಹಿರಿಯ ಸಾಮಾಜಿಕ, ರಾಜಕೀಯ ನೇತಾರ ಹಾಗೂ ಜಿಪಂ ಮಾಜಿ ಸದಸ್ಯ ಸದಾನಂದ ಮಲ್ಲಿ (82) ಬಂಟ್ವಾಳದ ಪಲ್ಲಮಜಲುವಿನಲ್ಲಿರುವ ಸ್ವಗೃಹದಲ್ಲಿ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ.

ಮೃತರು ಪತ್ನಿ, ಪುತ್ರಿ, ಪುತ್ರ ಮತ್ತು ರಾಜ್ಯದ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಸುದೀರ್ಘ ಅವಧಿಗೆ ಆಗಿನ ಬಂಟ್ವಾಳ ಪಟ್ಟಣ ಪಂಚಾಯತ್ ಈಗಿನ ಪುರಸಭೆಯ ಸದಸ್ಯರಾಗಿದ್ದ ಅವರು ಬಂಟ್ವಾಳ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ, ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಸಹಿತ ಹಲವು ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಸದಾನಂದ ಮಲ್ಲಿ ಜಿಲ್ಲಾ ಪಂಚಾಯತ್ ಗೆ ನೀರುಮಾರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

- Advertisement -
spot_img

Latest News

error: Content is protected !!