Saturday, June 6, 2026
Homeತಾಜಾ ಸುದ್ದಿಬಾಲಕಿಯನ್ನು ಕಾನೂನೂ ಬಾಹಿರವಾಗಿ ದತ್ತು ಪಡೆದ ಪ್ರಕರಣ; ಪರಪ್ಪನ ಅಗ್ರಹಾರ ಸೇರಿದ ಬಿಕಿನಿ ಬೇಬಿ ಸೋನು...

ಬಾಲಕಿಯನ್ನು ಕಾನೂನೂ ಬಾಹಿರವಾಗಿ ದತ್ತು ಪಡೆದ ಪ್ರಕರಣ; ಪರಪ್ಪನ ಅಗ್ರಹಾರ ಸೇರಿದ ಬಿಕಿನಿ ಬೇಬಿ ಸೋನು ಗೌಡ

- Advertisement -
- Advertisement -

ಬೆಂಗಳೂರು: ಬಾಲಕಿಯನ್ನು ಕಾನೂನೂ ಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೀಲ್ಸ್ ರಾಣಿ, ಬಿಕಿನಿ ಬೇಬಿ ಸೋನು ಗೌಡ ಪರಪ್ಪನ ಅಗ್ರಹಾರ ಸೇರಿದ್ದಾಳೆ.

ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನುಳನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದರು. ಕೋರ್ಟ್ ಗೆ ಹಾಜರುಪಡಿಸಿದ ವೇಳೆ ಆಕೆಯನ್ನು ಕೋರ್ಟ್ 4 ದಿನಗಳ ಕಾಲ ಪೊಲೀಸರ ಕಸ್ಟಡಿಗೆ ನೀಡಿತ್ತು. ಇಂದು ಆಕೆಯ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಆಕೆಯನ್ನು ಮತ್ತೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್ ಗೆ 1 5ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಅದರಂತೆ ಸೋನು ಈಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಳೆ.

ಇನ್ನು ನಿನ್ನೆ ಸೋನು ಶ್ರೀನಿವಾಸಗೌಡಳನ್ನು ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು ಬಾಲಕಿಯ ಊರಾದ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಕಾಚಾಪುರ ಗ್ರಾಮಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದರು.

- Advertisement -

Latest News

error: Content is protected !!