Thursday, June 25, 2026
Homeಅಪರಾಧಪುತ್ತೂರು: ಹೆತ್ತಬ್ಬೆಯನ್ನೆ ಅತ್ಯಾಚಾರ ಮಾಡಿದ ಪಾಪಿ ಮಗ

ಪುತ್ತೂರು: ಹೆತ್ತಬ್ಬೆಯನ್ನೆ ಅತ್ಯಾಚಾರ ಮಾಡಿದ ಪಾಪಿ ಮಗ

- Advertisement -
- Advertisement -

ಪುತ್ತೂರು: ತಾಯಿಯ ಮೇಲೆಯೇ ಮಗ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರ ಎಂಬಲ್ಲಿ ನಡೆದಿದೆ.

ಜ .12 ರ ತಡ ರಾತ್ರಿ ತಡ ರಾತ್ರಿ ಹಾಗೂ ಮರು ದಿನ ಬೆಳಿಗ್ಗೆ, 2 ಬಾರಿ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಗನ ಪೈಶಾಚಿಕ ಕೃತ್ಯದಿಂದ ಸಂತ್ರಸ್ತ ತಾಯಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

58 ವರ್ಷದ ಸಂತ್ರಸ್ತ ಮಹಿಳೆಯೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಮಗನ ವಿರುದ್ಧ ಐಪಿಸಿ ಸೆಕ್ಷನ್ 376(2) (n) 506 ರಂತೆ ಪ್ರಕರಣ ದಾಖಲಾಗಿದೆ.

ಜ.12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಆರೋಪಿಯು ತನ್ನ ಕೋಣೆಯಲ್ಲಿ ಮಲಗಿದ್ದು 3 ಗಂಟೆ ನಸುಕಿನ ವೇಳೆ ತಾಯಿ ಮಲಗಿದ್ದ ರೂಮ್ ಗೆ ತೆರಳಿ ಅತ್ಯಾಚಾರವೆಸಗಿದ್ದಾನೆ. ಈ ಸಂದರ್ಭ ತಾಯಿಯೂ ಕಿರುಚಾಡಿ ಆತನನ್ನು ತಳ್ಳಿ ಹಾಕಲು ಯತ್ನಿಸಿದ್ದು ಆ ವೇಳೆ ಆರೋಪಿಯು ತನ್ನ ತಾಯಿಯ ಬಾಯಿಯನ್ನು, ಬಟ್ಟೆಯಿಂದ ಒತ್ತಿ ಹಿಡಿದು ಗೊಬೈ ಹಾಕದಂತೆ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.

- Advertisement -

Latest News

error: Content is protected !!