Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಉಜಿರೆಯಲ್ಲಿ ಮಗನಿಂದ ತಂದೆಯ ಕೊಲೆ ಯತ್ನ: ಆರೋಪಿ ಮಗನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ಉಜಿರೆಯಲ್ಲಿ ಮಗನಿಂದ ತಂದೆಯ ಕೊಲೆ ಯತ್ನ: ಆರೋಪಿ ಮಗನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ತಂದೆ ಮಗನ ನಡುವೆ ನಡೆದ ಗಲಾಟೆ ಕತ್ತಿಯಿಂದ ಕಡಿದು ಕೊಲೆ ಮಾಡುವವರೆಗೂ ಹೋಗಿದ್ದು. ಸದ್ಯ ತಂದೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಣಿಕೆ ನಿವಾಸಿ ಗಾರೆಕೆಲಸ ಮಾಡುತ್ತಿರುವ ನಾರಾಯಣ(52) ಮತ್ತು ಟಿಂಬರ್ ಕೆಲಸ ಮಾಡುತ್ತಿದ್ದ ಮಗ ಭರತ್ (25) ನಡುವೆ ಮನೆಯಲ್ಲಿರುವಾಗ ಏ.19 ರಂದು ರಾತ್ರಿ ಸುಮಾರು 7:30 ಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ನಡುವೆ ಮನೆಯ ಹೊರಭಾಗದಲ್ಲಿದ್ದ ತಂದೆಗೆ ಕತ್ತಿಯಿಂದ ಕುತ್ತಿಗೆ ಮತ್ತು ಕೈಗೆ ಕಡಿದಿದ್ದಾನೆ. ತಕ್ಷಣ ಹತ್ತಿರದ ಮನೆಯವರು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಏ.19 ರಂದು ಮಧ್ಯರಾತ್ರಿ ಕಲಂ 109,352,351(3) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಪ್ರಭಾರ ಸಬ್ ಇನ್ಸ್‌ಪೆಕ್ಟರ್ ಸಿಖಂದರ್ ಪಾಷ ನೇತೃತ್ವದ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವಾಗ ಆರೋಪಿ ಮಗ ಭರತ್(25) ಎಂಬಾತನನ್ನು ಏ.20 ರಂದು ಬೆಳಗ್ಗೆ ಉಜಿರೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ರಾತ್ರಿ ಬಂಟ್ವಾಳ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ಬೆಳ್ತಂಗಡಿ ಪ್ರಭಾರ ಸಬ್ ಇನ್ಸ್‌ಪೆಕ್ಟರ್ ಸಿಖಂದರ್ ಪಾಷ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Latest News

error: Content is protected !!