Tuesday, May 7, 2024
Homeಕರಾವಳಿಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ ಕಾರ್ಕಳದ ಶೈಲಜಕ್ಕ: ಶೈಲಜಾ ಕಾರ್ಕಳ ಅವರ ಕ್ರಿಯೇಟಿವಿಟಿಗೆ ಅಭಿಮಾನಿಗಳು...

ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ ಕಾರ್ಕಳದ ಶೈಲಜಕ್ಕ: ಶೈಲಜಾ ಕಾರ್ಕಳ ಅವರ ಕ್ರಿಯೇಟಿವಿಟಿಗೆ ಅಭಿಮಾನಿಗಳು ಫಿದಾ

spot_img
- Advertisement -
- Advertisement -

ಕಾರ್ಕಳ : ಸೋಷಿಯಲ್ ಮೀಡಿಯಾ ಅನ್ನೋ ರಂಗಿನ್ ದುನಿಯಾದಲ್ಲಿ ಯಾರ ಲಕ್ ಹೇಗೆ ಬೇಕಾದರೂ ಖುಲಾಯಿಸಬಹುದು ಎಂಬುವುದಕ್ಕೆ ಸಾಕಷ್ಟು ಪುರಾವೆಗಳು ನಮ್ಮಲ್ಲಿವೆ. ಏನೂ ಅಲ್ಲದವರು ಸೋಷಿಯಲ್ ಮೀಡಿಯಾ ಮೂಲಕ ಸ್ಟಾರ್ ಗಳಾದ ಕಹಾನಿ ಒಂದೆರಡಲ್ಲ. ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ರಾನು ಮಂಡಲ್ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದ ಮೂಲಕ ಸ್ಟಾರ್ ಆಗಿದ್ದು ಯಾರೂ ಮರೆತಿಲ್ಲ.


ಕೆಲವರು ಸಿಕ್ಕ ಸಾಮಾಜಿಕ ಜಾಲತಾಣದ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನಕ್ಕೊಂದು ದಾರಿ ಕಂಡುಕೊಂಡರೆ ಇನ್ನೂ ಕೆಲವರು ಯಶಸ್ಸಿನ ತುತ್ತತುದಿಯಲ್ಲಿದ್ದೇನೆ ಅನ್ನೋ ಭ್ರಮಾ ಲೋಕದಲ್ಲಿ ವಿಹರಿಸಿ ದೊಪ್ಪನೆ ಜಾರಿ ಬಿದ್ದಿದ್ದಾರೆ. ಅವರೆಲ್ಲಾ ಕಥೆಯನ್ನು ನಾವೀಗ ಸೈಡಿಗಿಡೋಣ. ಸದ್ಯ ನಾವು ಹೇಳ್ತಿರೋದು ಕರಾವಳಿಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿ ಲೇಡಿಯೊಬ್ಬರ ಬಗ್ಗೆ. ಅವರೇ ನಮ್ಮ ಬಸದಿಗಳ ನಾಡು ಕಾರ್ಕಳದ ಶೈಲಜಾ ಕಾರ್ಕಳ ಅಲಿಯಾಸ್ ಅಭಿಮಾನಿಗಳ ಪಾಲಿನ ಶೈಲಜಕ್ಕ.


ವಾಯ್ಸ್ ಆಫ್ ಆರಾಧಾನ ಎಂಬ ಫೇಸ್ ಬುಕ್ ಪೇಜ್ ಮೂಲಕ ಇವರ ಪ್ರತಿಭೆ ಅನಾವರಣವಾಯಿತು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶೈಲಜಾ ಕಾರ್ಕಳ ಸಿಕ್ಕಾಪಟ್ಟೆ ಆಕ್ಟೀವ್. ದಿನಕ್ಕೆ ನಾಲ್ಕೈದು ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಲ್ಲ ಅಂದ್ರೆ ಶೈಲಜಕ್ಕಿನಿಗೆ ಯಾಕೋ ಮನಸ್ಸಿಗೆ ಸಮಾಧಾನವಿಲ್ಲ. ಅದರಲ್ಲೂ ಅವರ ನವಿಲೇ ಹಾಡಿನ ವಿಡಿಯೋವನ್ನಂತೂ ಅಭಿಮಾನಿಗಳು ಇಂದಿಗೂ ಹುಡುಕಿ ಹುಡುಕಿ ನೋಡ್ತಾರೆ. ಶೈಲಜಾ ಕಾರ್ಕಳ ಅವರು ಹಾಕುವ ವಿಡಿಯೋಗಳಿಗಿಂತ ಆ ವಿಡಿಯೋಗಳಿಗೆ ಬರುವ ಕಮೆಂಟ್ ಗಳನ್ನು ಓದೋದೇ ಒಂಥರಾ ರಿಪ್ರೆಶ್ ಮೆಂಟ್.ಆರಂಭದಲ್ಲಿ ಕೆಲವೇ ವ್ಯೂವ್ಸ್ ಪಡೆಯುತ್ತಿದ್ದ ಶೈಲಜಾ ಅವರು ಹಾಕುತ್ತಿದ್ದ ವಿಡಿಯೋಗಳು ಈಗ ಸಾವಿರಾರು ವ್ಯೂವ್ಸ್ ಗಳನ್ನು ಪಡೆದುಕೊಳ್ಳುತ್ತಿದೆ ಅಂದ್ರೆ ಅವರ ಹವಾ ಹೇಗಿದೆ ಅಂತಾ ನೀವೇ ಊಹಿಸಿಕೊಳ್ಳಿ. ಫ್ಯಾನ್ ಫಾಲೋವರ್ಸ್ ಯಾವ ರೇಂಜಿಗಿದ್ದಾರೆ ಕಲ್ಪಿಸಿಕೊಳ್ಳಿ.


ಶೈಲಜಾ ಅವರು ಹಾಕುವ ವಿಡಿಯೋ ನೋಡಿ ಅಭಿಮಾನಿಗಳು ಅವರನ್ನು ಸಿಕ್ಕಾಪಟ್ಟೆ ಕಾಲೆಳೆಯುತ್ತಾರೆ. ಆದ್ರೆ ಖುಷಿಯ ವಿಚಾರ ಅಂದ್ರೆ ಅದಕ್ಕೆ ಅವರು ಒಂದು ದಿನಾನೂ ಬೇಸರಿಸಿಕೊಂಡಿಲ್ಲ. ಕೋಪಗೊಂಡಿಲ್ಲ. ಕುಗ್ಗಿಲ್ಲ. ಅವಮಾನವಾಯ್ತು ಅಂತಾ ವಿಡಿಯೋ ಮಾಡೋದನ್ನು ನಿಲ್ಲಿಸಿಲ್ಲ. ತಮ್ಮ ಚಲ ಮುಂದುವರೆಸಿದ್ದಾರೆ. ಟೀಕೆಗಳನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡು ಮುನ್ನುಗುತ್ತಿದ್ದಾರೆ.

ಇನ್ನು ಶೈಲಜಾ ಕಾರ್ಕಳ ಅವರ ಮೇಲೆ ಅನೇಕ ಬಾರಿ ಕಲಾಸ್ತಕರು ಗರಂ ಆಗಿದ್ದು ಉಂಟು.ಕೆಲವೊಂದು ಹಾಡುಗಳ ಸಾಹಿತ್ಯವನ್ನು ತಿರುಚಿ ಹಾಡಿದ್ದಕ್ಕೆ ಅಕ್ಕ ಬೈಯಿಸಿಕೊಂಡಿದ್ದು ಇದೆ. ಏನೇ ಅವಮಾನವಾದರೂ ತಮ್ಮ ಪ್ರಯತ್ನ ಮುಂದುವರೆಸಿರುವ ಅಕ್ಕನನ್ನು ಮೆಚ್ಚಲೇ ಬೇಕು. ಮನೋರಂಜನೆ ನೀಡೋದಷ್ಟೇ ನನ್ನ ಕೆಲಸ ಸ್ವೀಕರಿಸೋದು ಬಿಡೋದು ನಿಮಗೆ ಬಿಟ್ಟಿದ್ದು ಎಂಬಂತೆ ಸದಾ ಹೊಸ ಹೊಸ ಕಾನ್ಸೆಪ್ಟ್ ಗಳ ವಿಡಿಯೋ ಮಾಡಿ ಹಾಕುವ ಶೈಲಜಕ್ಕಾ ಫೇಸ್ ಬುಕ್ ನಲ್ಲಿ ತಮ್ಮದೇ ಆದ ಶೈಲಜಾ ಶೈಲು ಅನ್ನೋ ಪೇಜ್ ಹೊಂದಿದ್ದಾರೆ.

ಇದೆಲ್ಲದರ ಮಧ್ಯೆ ಮಾತೊಂದು ಕೇಳಿ ಬರುತ್ತಿದೆ. ಅದೇನಪ್ಪಾ ಅಂದ್ರೆ ಶೈಲಜಕ್ಕ ಮಾಡೋ ವಿಡಿಯೋ ನೋಡಿ ಜನ ಕಮೆಂಟ್ ಮಾಡಿ ಕಾಲೆಳೆಯುತ್ತಿದ್ದರೆ, ಇತ್ತ ಶೈಲಜಕ್ಕ ಇಂತಹ ವಿಡಿಯೋಗಳ ಮೂಲಕವೇ ತಮ್ಮ ಪೇಜ್ ನ್ನು ಮಾನಿಟೈಸ್ ಮಾಡಿಕೊಳ್ಳುತ್ತಿದ್ದಾರೆ ಅಂತಾ. ಏನೇ ಆಗಲಿ ಅವರ ಛಲ, ಪ್ರಯತ್ನಕ್ಕೆ ನಮ್ಮ ಸಲಾಂ. ಆದರೆ ತಪ್ಪು ಮಾಹಿತಿ ರವಾನಿಸದಿರಲಿ ಅನ್ನೋದು ಅವರ ಅಸಂಖ್ಯಾತ ಅಭಿಮಾನಿಗಳ ಸವಿನಯ ಕೋರಿಕೆ.

- Advertisement -
spot_img

Latest News

error: Content is protected !!