Monday, April 29, 2024
Homeಕರಾವಳಿವಿಟ್ಲ: ಗುಡ್ಡದಲ್ಲಿ ಗಂಡಸಿನ ತಲೆಬುರುಡೆ ಮತ್ತು ಎಲುಬು ಪತ್ತೆ, ಸ್ಥಳೀಯರಲ್ಲಿ ಆತಂಕ

ವಿಟ್ಲ: ಗುಡ್ಡದಲ್ಲಿ ಗಂಡಸಿನ ತಲೆಬುರುಡೆ ಮತ್ತು ಎಲುಬು ಪತ್ತೆ, ಸ್ಥಳೀಯರಲ್ಲಿ ಆತಂಕ

spot_img
- Advertisement -
- Advertisement -

ವಿಟ್ಲ:  ಗುಡ್ಡದಲ್ಲಿ ಗಂಡಸಿನ ತಲೆಬುರುಡೆ ಮತ್ತು ಎಲುಬು ಪತ್ತೆ, ಸ್ಥಳೀಯರಲ್ಲಿ ಆತಂಕ ಮೂಡಿಸಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ನೆಕ್ಕರೆ ಕಾಡಿನ ಸಮೀಪದ ಗುಡ್ಡದಲ್ಲಿ ನಡೆದಿದೆ.

ನಿನ್ನೆ ಸಂಜೆ ವೇಳೆ ಕಟ್ಟಿಗೆ ತರಲು ಗುಡ್ಡಕ್ಕೆ ಹೋದವರಿಗೆ ಈ ತಲೆ ಬುರುಡೆ, ಎಲುಬು ಬಟ್ಟೆಗಳು ಕಾಣ ಸಿಕ್ಕಿದ್ದು, ಅವರು ಮನೆಗೆ ಬಂದು ತಿಳಿಸಿದ್ದು, ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ವ್ಯಕ್ತಿಯ ಪಂಚೆ, ಶರ್ಟ್ ಪತ್ತೆಯಾಗಿದ್ದು ಇದು ಗಂಡಸಿನ ಅಸ್ಥಿಪಂಜರ ಅನ್ನೋದು ಗೊತ್ತಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಈ ಹಿಂದೆ ಕಾಣೆಯಾದವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!