Thursday, June 4, 2026
Homeಕರಾವಳಿಮಂಗಳೂರು: ನೇಣು ಬಿಗಿದುಕೊಂಡು ಅಕ್ಕತಂಗಿಯರಿಬ್ಬರು ಆತ್ಮಹತ್ಯೆ

ಮಂಗಳೂರು: ನೇಣು ಬಿಗಿದುಕೊಂಡು ಅಕ್ಕತಂಗಿಯರಿಬ್ಬರು ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ನೇಣು ಬಿಗಿದುಕೊಂಡು ಅಕ್ಕತಂಗಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ನಡೆದಿದೆ. ಲತಾ ಭಂಡಾರಿ (70) ಮತ್ತು ಸುಂದರಿ ಶೆಟ್ಟಿ (80) ಆತ್ಮಹತ್ಯೆಗೆ ಶರಣಾದವರು.

ಲತಾ ಭಂಡಾರಿ (70) ಹಾಗೂ ಅವರ ಪತಿ ಜಗನ್ನಾಥ ಭಂಡಾರಿ ಅವರ ಜೊತೆ ಲತಾ ಅವರ ಸಹೋದರಿ ಸುಂದರಿ ಶೆಟ್ಟಿ (80) ವಾಸವಾಗಿದ್ದರು. ಎಂದಿನಂತೆ ಜಗನ್ನಾಥ್ ಭಂಡಾರಿ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆಗೆ ಮನೆಗೆ ತೆರಳಿದಾಗ ಇಬ್ಬರು ಸಹೋದರಿಯರು ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಜಗನ್ನಾಥ ಭಂಡಾರಿ ಮನೆಗೆ ತೆರಳಿದಾಗ ಮನೆಯ ಬಾಗಿಲು ಮುಚ್ಚಲ್ಪಟ್ಟಿತ್ತು. ಕಿಟಕಿಯಿಂದ ನೋಡಿದಾಗ ಸಹೋದರಿಯರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ

. ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ, ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!