Thursday, July 4, 2024
Homeಕರಾವಳಿಮಂಗಳೂರುಬಂಟ್ವಾಳ: ಸ್ಮಶಾನದ ಕಾಮಗಾರಿಗಾಗಿ ಇರಿಸಿದ್ದ ಸಿಲಿಕಾನ್‌ ಛೇಂಬರ್‌ ನ ಬಿಡಿ ಭಾಗಗಳು ಕಳ್ಳತನ

ಬಂಟ್ವಾಳ: ಸ್ಮಶಾನದ ಕಾಮಗಾರಿಗಾಗಿ ಇರಿಸಿದ್ದ ಸಿಲಿಕಾನ್‌ ಛೇಂಬರ್‌ ನ ಬಿಡಿ ಭಾಗಗಳು ಕಳ್ಳತನ

spot_img
- Advertisement -
- Advertisement -

ಬಂಟ್ವಾಳ: ಸ್ಮಶಾನದ ಕಾಮಗಾರಿಗಾಗಿ ಇರಿಸಿದ್ದ ಸಿಲಿಕಾನ್‌ ಛೇಂಬರ್‌ ನ ಬಿಡಿ ಭಾಗಗಳು ಕಳ್ಳತನವಾಗಿರುವ ಘಟನೆ ವ್ಯಾಪ್ತಿಯ ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಗ್ರಾಮದ ಪಂಚಾಯತ್‌ ಅಭಿವೃದ್ದಿ ಅಧಿಕಾರಿ ದೇವಕಿ ಅವರು ದೂರು ದಾಖಲಿಸಿದ್ದಾರೆ.

ಬಡಗಕಜೆಕಾರು ಗ್ರಾಮ ಪಂಚಾಯತ್‌ ನ  ಸಾರ್ವಜನಿಕ ಸ್ಮಶಾನದ ಕಾಮಗಾರಿಗಾಗಿ,  ಸಿಲಿಕಾನ್‌ ಛೇಂಬರ್‌ ನ್ನು ದಿನಾಂಕ 08.03.2024 ರಂದು ಅಳವಡಿಸಲಾಗಿತ್ತು. ದಿನಾಂಕ 01.07.2024 ರಂದು ಬೆಳಿಗ್ಗೆ, ಕಟ್ಟಡ ಕಾಮಗಾರಿಯ ಕಂಟ್ರಾಕ್ಟರ್‌ ನೋಡಿದಾಗ, ಸಿಲಿಕಾನ್‌ ಛೇಂಬರ್‌ನ ಬಿಡಿ ಭಾಗ ಮತ್ತು ಕಾಮಗಾರಿ ಸಾಮಾಗ್ರಿಗಳು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಗ್ರಾಮದ ಪಂಚಾಯತ್‌ ಅಭಿವೃದ್ದಿ ಅಧಿಕಾರಿ ದೇವಕಿ ಅವರಿಗೆ ಮಾಹಿತಿ ಬಂದ ಮೇರೆಗೆ, ಅವರು ಹಾಗೂ ಪಂಚಾಯತ್‌ ಆಡಳಿತ ಮಂಡಳಿಯವರು ಹೋಗಿ ಪರೀಶೀಲಿಸಲಾಗಿ, ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ 70,000/- ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯ ಅ.ಕ್ರ53/2024 ಕಲಂ: 303(2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -
spot_img

Latest News

error: Content is protected !!