Thursday, June 4, 2026
Homeತಾಜಾ ಸುದ್ದಿ'ನಾವು ಪಾತ್ರಧಾರಿಗಳಷ್ಟೇ, ನಿಜವಾದ ಹೀರೋಗಳು ನೀವು'

‘ನಾವು ಪಾತ್ರಧಾರಿಗಳಷ್ಟೇ, ನಿಜವಾದ ಹೀರೋಗಳು ನೀವು’

- Advertisement -
- Advertisement -

ಬೆಂಗಳೂರು: ಪ್ರಾಣಕ್ಕೆ ಅಂಜದೇ ನಮ್ಮೆಲ್ಲರಿಗೋಸ್ಕರ ಹೋರಾಡುತ್ತಿರುವ ಯೋಧರೇ ನಿಜವಾದ ಹೀರೋಗಳು ಎಂದು ನಟಿ ಮತ್ತು ನಿರೂಪಕಿ ಶ್ವೇತಾ ಚಂಗಪ್ಪ ಅವರು ಹೇಳಿದ್ದಾರೆ.

ಈಗ ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಶ್ವೇತಾ ಚಂಗಪ್ಪ. ದೇಶ ಕಾಯುವ ಯೋಧರೇ, ನೀವು ನಮ್ಮೆಲ್ಲರ ಜೀವನದ ನಿಜವಾದ ಹೀರೋಗಳು. ನಿಮ್ಮನ್ನು ಬಣ್ಣಿಸಲು ಪದಗಳು ಸಿಗುವುದಿಲ್ಲ. ಪರದೆಯ ಮೇಲೆ ಪಾತ್ರ ಮಾಡುವ ನಾವು ನಟ ನಟಿಯರು ಹಾಗೂ ಕೇವಲ ಪಾತ್ರಧಾರಿಗಳು ಅಷ್ಟೇ. ಆದರೆ ನೀವು ನಿಜವಾದ ಹೀರೋಗಳು ಎಂದು ಯೋಧರನ್ನು ಹಾಡಿಹೊಗಳಿದ್ದಾರೆ.

ಜೊತೆಗೆ ನಿಮ್ಮ ಪ್ರಾಣಕ್ಕೆ ಅಂಜದೆ ನಮ್ಮ ದೇಶಕ್ಕಾಗಿ, ನಮ್ಮೆಲ್ಲರಿಗೋಸ್ಕರ ಹೋರಾಟ ಮಾಡುತ್ತೀರಿ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಪ್ರತಿಯೊಬ್ಬ ಭಾರತೀಯ ಸೈನಿಕನಿಗೂ ನನ್ನ ಕೋಟಿ ಕೋಟಿ ನಮನ. ನಿಮ್ಮ ಬಲಿದಾನಕ್ಕೆ ನಾನು ಚಿರಋಣಿ. ಯುದ್ಧದಲ್ಲಿ ಅಮರರಾಗಿರುವ ಎಲ್ಲಾ ಯೋಧರ ಕುಟುಬದವರಿಗೆ ಆ ಭಗವಂತ ಹೆಚ್ಚಿನ ಶಕ್ತಿಯನ್ನೂ ಕೊಡಲಿ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಡಿರುವ ಶ್ವೇತಾ ಭಾರತೀಯ ಸೇನೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

- Advertisement -

Latest News

error: Content is protected !!