Saturday, April 27, 2024
Homeತಾಜಾ ಸುದ್ದಿವಿಪ್ರೋ ಸೇರಿದಂತೆ ಹೆಸರಾಂತ ಕಂಪನಿಗಳಿಗೆ ಸೆಲೆಕ್ಟ್‌ ಆಗಿದ್ದ ಫ್ರೆಶರ್ಸ್‌ಗೆ ಶಾಕ್: ಉದ್ಯೋಗ ರದ್ದುಗೊಳಿಸಿದ ಐಟಿ ಕಂಪನಿಗಳು

ವಿಪ್ರೋ ಸೇರಿದಂತೆ ಹೆಸರಾಂತ ಕಂಪನಿಗಳಿಗೆ ಸೆಲೆಕ್ಟ್‌ ಆಗಿದ್ದ ಫ್ರೆಶರ್ಸ್‌ಗೆ ಶಾಕ್: ಉದ್ಯೋಗ ರದ್ದುಗೊಳಿಸಿದ ಐಟಿ ಕಂಪನಿಗಳು

spot_img
- Advertisement -
- Advertisement -

ಬೆಂಗಳೂರು: ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಉದ್ಯೋಗ ಗಿಟ್ಟಿಸಿಕೊಂಡಿದ್ದ ಫ್ರೆಷರ್ಸ್‌ಗಳಿಗೆ ಐಟಿ ಕಂಪನಿಗಳು ಇದೀಗ ಶಾಕ್ ನೀಡಿವೆ. ನೂರಾರು ಮಂದಿಗೆ ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ ಮೊದಲಾದ ಕಂಪನಿಗಳು ಈಗ ಉದ್ಯೋಗ ರದ್ದುಗೊಳಿಸಿರುವ ಮಾಹಿತಿಯನ್ನು ನೀಡಿವೆ ಎಂದು ತಿಳಿದು ಬಂದಿದೆ.

ತಾವು ಹೆಸರಾಂತ ಐಟಿ ಕಂಪನಿಗಳಿಗೆ ಆಯ್ಕೆಯಾದ ಸಂತಸದಲ್ಲಿದ್ದ ಫ್ರೆಶರ್ಸ್ ಗಳು ಈಗ ಉದ್ಯೋಗ ನಿರಾಕರಣೆಯ ಮಾಹಿತಿ ಸಿಗುತ್ತಿದ್ದಂತೆ ಕಂಗಾಲಾಗಿದ್ದಾರೆ. ಅಲ್ಲದೆ ತಮಗೆ ಈ ಕಂಪನಿಗಳಲ್ಲಿ ಉದ್ಯೋಗ ಸಿಕ್ಕ ಕಾರಣ ಇತರೆ ಕಂಪನಿಗಳಿಗೂ ಸಹ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿರಲಿಲ್ಲವೆಂದು ಹೇಳಲಾಗಿದ್ದು, ಇದೀಗ ಅತಂತ್ರರಾಗಿದ್ದಾರೆ. ಉದ್ಯೋಗ ನಿರಾಕರಣೆ ಇ-ಮೇಲ್ ಕಳಿಸುವ ವೇಳೆ ನಿಮ್ಮ ಶೈಕ್ಷಣಿಕ ಅರ್ಹತೆ ನಾವು ನಿಗಧಿಪಡಿಸಿದ ಮಟ್ಟದಲ್ಲಿಲ್ಲ ಎಂದು ತಿಳಿಸಲಾಗಿದೆ ಎನ್ನಲಾಗಿದ್ದು, ಹಾಗಾದರೆ ಸಂದರ್ಶನದ ಬಳಿಕ ಆಫರ್ ಲೆಟರ್ ಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಈಗ ಮೂಡಿದೆ.

ಬಹುತೇಕ ಫ್ರೆಶರ್ಸ್ ಗಳಿಗೆ ಏಳೆಂಟು ತಿಂಗಳ ಹಿಂದೆಯೇ ಆಫರ್ ಲೆಟರ್ ಸಿಕ್ಕಿದೆ ಎನ್ನಲಾಗಿದ್ದು, ಇದೀಗ ಇಂಜಿನಿಯರಿಂಗ್ ಅಂತಿಮ ವರ್ಷದ ಫಲಿತಾಂಶವೂ ಹೊರ ಬಿದ್ದಿದೆ. ಹೀಗಾಗಿ ಇನ್ನೇನು ಕೆಲ ದಿನಗಳಲ್ಲೇ ಉದ್ಯೋಗಕ್ಕೆ ಹೋಗಬಹುದೆಂಬ ಕನಸು ಕಂಡಿದ್ದ ಇವರುಗಳು ಇದೀಗ ನಿರಾಕರಣೆ ಇ-ಮೇಲ್ ಬರುತ್ತಿರುವ ಕಾರಣ ನಿರಾಸೆಗೊಂಡಿದ್ದಾರೆ.

- Advertisement -
spot_img

Latest News

error: Content is protected !!