Sunday, June 7, 2026
Homeತಾಜಾ ಸುದ್ದಿಚಿರಂಜೀವಿ ಸರ್ಜಾ ಶ್ರದ್ದಾಂಜಲಿ ಕೋರುವಲ್ಲಿ ಎಡವಟ್ಟು ಮಾಡಿಕೊಂಡ ಲೇಖಕಿ ಶೋಭಾ ಡೇ! ಈ ಚಿರು ಬದಲು,...

ಚಿರಂಜೀವಿ ಸರ್ಜಾ ಶ್ರದ್ದಾಂಜಲಿ ಕೋರುವಲ್ಲಿ ಎಡವಟ್ಟು ಮಾಡಿಕೊಂಡ ಲೇಖಕಿ ಶೋಭಾ ಡೇ! ಈ ಚಿರು ಬದಲು, ಆ ಚಿರು ಫೋಟೋ!

- Advertisement -
- Advertisement -

ನಟ ಚಿರಂಜೀವಿ ಸರ್ಜಾ ಅವರ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಖ್ಯಾತ ಲೇಖಕಿ ಶೋಭಾ ಡೇ ಒಂದು ಟ್ವೀಟ್ ಮಾಡಿದ್ದರು. ‘ಮತ್ತೊಬ್ಬ ಶೈನಿಂಗ್ ಸ್ಟಾರ್‌ನನ್ನು ಕಳೆದುಕೊಂಡಿದ್ದೇವೆ. ಎಂತಹ ದುರಂತ ಸಾವು ಇದು. ಅವರ ಕುಟುಂಬದವರಿಗೆ ದುಃಖ ಬರಿಸುವ ಶಕ್ತಿ ಸಿಗಲಿ’ ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಚಿರು ಸರ್ಜಾ ಅವರ ಟ್ವಿಟರ್ ಖಾತೆಯನ್ನು ಟ್ಯಾಗ್ ಕೂಡ ಮಾಡಿದ್ದರು. ಆದರೆ, ಫೋಟೋ ಹಾಕೋ ವಿಚಾರದಲ್ಲಿ ಮಾತ್ರ ಅವರು ಯಾಮಾರಿದ್ದರು. ಹೌದು, ಚಿರು ಸರ್ಜಾ ಫೋಟೋ ಬದಲು, ಅಲ್ಲಿ ತೆಲುಗಿನ ‘ಮೆಗಾ ಸ್ಟಾರ್’ ಚಿರಂಜೀವಿ ಫೋಟೋ ಹಾಕಿಬಿಟ್ಟಿದ್ದರು.

ತಕ್ಷಣವೇ ಟ್ವೀಟ್‌ ಡಿಲೀಟ್!
ಹೀಗೆ ಟ್ವೀಟ್ ಮಾಡುತ್ತಲೇ ಅದು ತಪ್ಪಾಗಿದೆ ಎಂಬುದು ಶೋಭಾ ಡೇ ಅವರ ಗಮನಕ್ಕೆ ಬಂದಿದೆ. ಇಂಥದ್ದೊಂದು ಮಹಾಪ್ರಮಾದ ಮಾಡಿದ್ದಕ್ಕಾಗಿ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾಗಿ, ಅವರು ಆ ಟ್ವೀಟ್ ಅನ್ನೇ ಡಿಲೀಟ್ ಮಾಡಿಬಿಟ್ಟಿದ್ದಾರೆ. ಅಷ್ಟರಲ್ಲಾಗಲೇ ಅದರ ಸ್ಕ್ರೀನ್ ಶಾಟ್ಸ್ ಎಲ್ಲೆಡೆ ಹರಿದಾಡಲು ಆರಂಭಿಸಿವೆ. ‘ಮೆಗಾ ಸ್ಟಾರ್’ ಅಭಿಮಾನಿಗಳಂತೂ ಶೋಭಾ ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

- Advertisement -

Latest News

error: Content is protected !!