Thursday, June 4, 2026
Homeಕರಾವಳಿಉಡುಪಿಬೆಂಗಳೂರು ಉತ್ತರದಲ್ಲಿ 2,59,476 ಮತಗಳ ಅಂತರದಿಂದ ಗೆದ್ದು ಬೀಗಿದ ಶೋಭಾ ಕರಂದ್ಲಾಜೆ

ಬೆಂಗಳೂರು ಉತ್ತರದಲ್ಲಿ 2,59,476 ಮತಗಳ ಅಂತರದಿಂದ ಗೆದ್ದು ಬೀಗಿದ ಶೋಭಾ ಕರಂದ್ಲಾಜೆ

- Advertisement -
- Advertisement -

ಬೆಂಗಳೂರು : ಚಿಕ್ಕಮಗಳೂರು ಉಡುಪಿ ಕ್ಷೇತ್ರದಿಂದ ಶೋಭ ಗೋ ಬ್ಯಾಕ್ ಅಭಿಯಾನದ ಬಳಿಕ ತೀವ್ರ ಮುಖಭಂಗ ಅನುಭವಿಸಿ ಕೊನೆಗೆ ಬೆಂಗಳೂರು ಉತ್ತರದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದ ಶೋಭಾ ಕರಂದ್ಲಾಜೆ ಗೆಲುವಿನ ನಗೆ ಬೀರಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭ ಕರಂದ್ಲಾಜೆ ಅವರು ಎರಡುವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಶೋಭಾ ಕರಂದ್ಲಾಜೆ ಗೆ 2,59,476 ಮತಗಳ ಅಂತರದಿಂದ ಜಯ ಸಿಕ್ಕಿದ್ದು, ಬಿಜೆಪಿಗೆ ಶೋಭಾ ಕರಂದ್ಲಾಜೆ ಅವರು 9,86,49 ಮತಗಳು ಪಡೆದುಕೊಂಡಿದ್ದಾರೆ. ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ ನ ಪ್ರೊ. ರಾಜೀವ್ ಗೌಡ ಅವರು 76,573 ಮತಗಳು ಪಡೆದುಕೊಂಡಿದ್ದಾರೆ.ಹೀಗಾಗಿ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯದರು ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!