Saturday, June 6, 2026
Homeಅಪರಾಧವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಪೊಲೀಸ್ ವಶಕ್ಕೆ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಪೊಲೀಸ್ ವಶಕ್ಕೆ

- Advertisement -
- Advertisement -

ದೆಹಲಿಯಿಂದ ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಯುವಕನೋರ್ವ ಮಹಿಳಾ ಪ್ರವಾಸಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಆರೋಪಿ ಹರಿಯಾಣದ ಪ್ರವಾಸಿ ಜಿತೆಂದರ ಜಂಗಿಯನ್(23) ಎಂಬಾತನನ್ನು ಗೋವಾದ ದಾಬೋಲಿಂ ಪೋಲಿಸರು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು 28 ವರ್ಷದ ದೆಹಲಿ ಮೂಲದ ಮಹಿಳೆ ಎಂದು ತಿಳಿದು ಬಂದಿದೆ.

ಜಿತೆಂದರ ಜಂಗಿಯನ್ ಎಂಬಾತನು ವಿಮಾನದಲ್ಲಿ 28 ವರ್ಷದ ದೆಹಲಿಯ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಪೋಲಿಸರು ಬಂಧಿಸಿದ್ದಾರೆ. ಏರ್ ಇಂಡಿಯಾ ಎಐ-884 ದೆಹಲಿ-ಗೋವಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಯುವತಿಯು ಗೋವಾ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಈ ಯುವಕನ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಳೆ.

- Advertisement -

Latest News

error: Content is protected !!