- Advertisement -
- Advertisement -
ಕಡಬ : ಮಸಾಜ್ ಸೆಂಟರ್ ಮಾಲಕನೊಬ್ಬ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪದಲ್ಲಿ ಮಹಿಳೆಯರಿಬ್ಬರು ನೀಡಿದ ದೂರಿನ ಮೇರೆಗೆ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳಾರ ದಲ್ಲಿ ನಡೆದಿದೆ.
ಕಳಾರದ ಸ್ನೇಹಾ ಮಸಾಜ್ ಸೆಂಟರ್ ಮಾಲಕ ಅಬ್ರಹಾಂ ಬಂಧಿತ ಆರೋಪಿ. ತನ್ನ ಮಸಾಜ್ ಪಾರ್ಲರ್ ನಲ್ಲಿ ಮಸಾಜ್ ಗಾಗಿ ಬರುವವರು ಮತ್ತು ಅಲ್ಲಿ ಕೆಲಸ ಮಾಡಿಕೊಂಡಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ. ಈಗಾಗಲೇ ಸಂತ್ರಸ್ತ ಮಹಿಳೆಗೆ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಮಹಿಳೆಯರ ಠಾಣೆಯಲ್ಲಿ ಮಾಧ್ಯಮಕ್ಕೆ ತಿಳಿಸಿದ್ದು, ದೂರಿನ ಹಿನ್ನೆಲೆಯಲ್ಲಿ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
- Advertisement -