Tuesday, July 1, 2025
Homeಕರಾವಳಿಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸುಳ್ಯ ತಾಲೂಕಿನ 7ರ ಹರೆಯದ ಸರಮಾ ಭಟ್ ಹೆಸರು!

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸುಳ್ಯ ತಾಲೂಕಿನ 7ರ ಹರೆಯದ ಸರಮಾ ಭಟ್ ಹೆಸರು!

spot_img
- Advertisement -
- Advertisement -

ಸುಳ್ಯ: ಜಾಲೂರು ಗ್ರಾಮದ ಮಾಬಲಡ್ಕ ಸರಮಾ ಭಟ್‌ ಎಂ. ಅವರು ಸಂಸ್ಕೃತದಲ್ಲಿ ಸ್ಪಷ್ಟ ಹಾಗೂ ನಿರರ್ಗಳವಾಗಿ ಶ್ಲೋಕಗಳನ್ನು ಪಠಿಸುವ ಮೂಲಕ ಅತಿ ಸಣ್ಣ ವಯಸ್ಸಿನಲ್ಲೇ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಬರುವಂತೆ ಸಾಧನೆ ಮಾಡಿದ್ದಾರೆ.

ಕನಕಧಾರ ಸ್ತೋತ್ರ 21 ಚರಣಗಳು, ದೇವ್ಯಾಪರಾಧ ಕ್ಷಮಾಪಣ ಸ್ತೋತ್ರ 12 ಚರಣಗಳು, ಶಿವ ಮಾನಸಪೂಜಾ ಸ್ತೋತ್ರ 20 ಗೆರೆಗಳು ಇವೆ. 10 ಸಂಸ್ಕೃತ ಸುಭಾಷಿತಗಳು, 12 ಮಾಸಗಳ ಹೆಸರು ಸಂಸ್ಕೃತದಲ್ಲಿ, ಪಂಚಾಂಗದ ಪ್ರಕಾರದಲ್ಲಿ ಸಂಸ್ಕೃತದಲ್ಲಿ ಇರುವ 15 ದಿನಗಳ ಹೆಸರು, 7 ದಿನಗಳ ಹೆಸರನ್ನು ಸಂಸ್ಕೃತದಲ್ಲಿ ಸ್ಪಷ್ಟವಾಗಿ, ನಿರರ್ಗಳವಾಗಿ ಪಠಿಸುತ್ತಾರೆ.ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ 7ರ ಹರೆಯದ ಸರಮಾ ಒಟ್ಟು 40 ನಿತ್ಯ ಪಠಣದ ಶ್ಲೋಕಗಳನ್ನು ಹೇಳುತ್ತಾರೆ.

ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಅವರ ಸಾಧನೆಯ ಹಿಂದಿನ ಪ್ರೇರಣೆಯಾಗಿದ್ದಾರೆ.ತನ್ನ 2ನೇ ವಯಸ್ಸಿನಿಂದಲೇ ಶ್ಲೋಕಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬಂದಿರುವ ಸರಮಾ ನಿತ್ಯವೂ ಕರಾಗ್ರೆ ವಸತೇ ಲಕ್ಷ್ಮಿ ಪಠಣದೊಂದಿಗೆ ದಿನವನ್ನು ಪ್ರಾರಂಭಿಸುತ್ತ ರಾಮಸ್ಕಂದಂ ಹನೂಮಂತಂನಲ್ಲಿ ಪೂರ್ಣಗೊಳಿಸುತ್ತಾರೆ.

ಓದುವ ಮೊದಲು, ಊಟದ ಮೊದಲು, ದೀಪ ಹಚ್ಚುವಾಗ ಹೀಗೆ ದಿನದಲ್ಲಿ ಹಲವು ಬಾರಿ ದೇವರ ನಾಮ ಸ್ಮರಣೆ ಅವರ ನಿತ್ಯದ ರೂಢಿ. ಈಕೆ ಸುರೇಶ್‌ ಕುಮಾರ್‌ ಎಂ. ಮತ್ತು ರಮ್ಯಾ ಸುರೇಶ್‌ ದಂಪತಿಗಳ ಪುತ್ರಿ.

- Advertisement -
spot_img

Latest News

error: Content is protected !!