Friday, December 6, 2024
Homeಕರಾವಳಿಮಂಗಳೂರು; ತೊಕ್ಕೊಟ್ಟಿನಲ್ಲಿ ಮೂರು ಅಂಗಡಿಯಲ್ಲಿ ಸರಣಿ ಕಳ್ಳತನ

ಮಂಗಳೂರು; ತೊಕ್ಕೊಟ್ಟಿನಲ್ಲಿ ಮೂರು ಅಂಗಡಿಯಲ್ಲಿ ಸರಣಿ ಕಳ್ಳತನ

spot_img
- Advertisement -
- Advertisement -

ಮಂಗಳೂರು; ತೊಕ್ಕೊಟ್ಟಿನ ಒಳಪೇಟೆಯಲ್ಲಿರುವ ಮೂರು ಅಂಗಡಿಯಲ್ಲಿ ಸರಣಿ ಕಳ್ಳತನವಾಗಿದೆ. ಮೂರು ಅಂಗಡಿಗೆ ನುಗ್ಗಿದ ಕಳ್ಳ ನಗದು ಹಾಗೂ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದು, ಈತನ ಕೃತ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ತೊಕ್ಕೊಟ್ಟು ಒಳಪೇಟೆಯಲ್ಲಿರುವ ಹರಿಶ್ಚಂದ್ರ ಶೆಟ್ಟಿ ಎಂಬವರಿಗೆ ಸೇರಿದ ಲಕ್ಷ್ಮಿ ಕ್ಯಾಂಟೀನ್‌ , ಹ್ಯಾರೀಸ್‌ ಎಂಬವರಿಗೆ ಸೇರಿದ ಸಿಲ್ವರ್‌ ಸ್ಟಾರ್‌ ಎಂಟರ್‌ಪ್ರೈಸಸ್‌ ಸ್ಟೀಲ್‌ ಸಾಮಗ್ರಿಗಳ ಮಾರಾಟ ಮಳಿಗೆ ಹಾಗೂ ಮೋಹನ್‌ ಎಂಬವರಿಗೆ ಸೇರಿದ ಎಸ್‌ ಎಸ್‌ ಕಮ್ಯುನಿಕೇಷನ್ಸ್‌ ಮೊಬೈಲ್‌ ಅಂಗಡಿಗಳಿಗೆ ಹೆಂಚು ತೆಗೆದು ಒಳನುಗ್ಗಿದ ಕಳ್ಳ ಕ್ಯಾಷ್‌ ನಲ್ಲಿದ್ದ ನಗದು ಹಾಗೂ ಕೆಲವು ಸಾಮಗ್ರಿಗಳನ್ನು ಕದ್ದಿದ್ದಾನೆ.

ಸಿಲ್ವರ್‌ ಸ್ಟಾರ್‌ ಅಂಗಡಿಯೊಳಗೆ ನಡೆಸಿದ ಕೃತ್ಯ ಅಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನ ಮುಖವೂ ಇದರಲ್ಲಿ ಪತ್ತೆಯಾಗಿದೆ.ಹೊರರಾಜ್ಯ ಅಥವಾ ನೇಪಾಳ ಮೂಲದ ಕಾರ್ಮಿಕರು ಕೃತ್ಯ ಎಸಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ತೊಕ್ಕೊಟ್ಟು ಸಹಿತ ಕಂಕನಾಡಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಹಲವೆಡೆ ಇದೇ ರೀತಿಯಲ್ಲಿ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!