Saturday, June 6, 2026
Homeತಾಜಾ ಸುದ್ದಿBreaking: ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟಿ ಶಾಂತಮ್ಮ ವಿಧಿವಶ

Breaking: ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟಿ ಶಾಂತಮ್ಮ ವಿಧಿವಶ

- Advertisement -
- Advertisement -

ಮೈಸೂರು : ಸ್ಯಾಂಡಲ್​ವುಡ್​ನಲ್ಲಿ ಹಿರಿಯ ನಟಿ ಎಂದೇ ಕರೆಸಿಕೊಂಡಿದ್ದಂತ ಬಿ. ಶಾಂತಮ್ಮ(95) ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತ ಹಿರಿಯ ನಟಿ ಶಾಂತಮ್ಮಗೆ ಮೂವರು ಮಕ್ಕಳಿದ್ದು, ಕಳೆದ ಹಲವು ವರ್ಷಗಳಿಂದ ಮೈಸೂರಿನಲ್ಲಿಯೇ ನಟಿ ಶಾಂತಮ್ಮ ವಾಸವಾಗಿದ್ದರು.

ನಿನ್ನೆ ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಹಠಾತ್ತಾಗಿ ಕುಸಿದುಬಿದ್ದಿದ್ದ ಶಾಂತಮ್ಮ ಅವರನ್ನು ತಕ್ಷಣ ಆಂಬುಲೆನ್ಸ್​​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಯಾವುದೇ ಆಸ್ಪತ್ರೆಯೂ ಸಹ ಅವರನ್ನು ದಾಖಲಿಸಿಕೊಳ್ಳಲಿಲ್ಲ. ಬೆಡ್ ಖಾಲಿ ಇಲ್ಲ ಎಂಬ ಸಬೂಬು ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.

ಹೀಗಾಗಿಯೇ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲು ಮಾಡುವ ಹೊತ್ತಿಗೆ ಮಧ್ಯರಾತ್ರಿ 1 ಗಂಟೆಯಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು ಎನ್ನಲಾಗಿದೆ. ಇವತ್ತು ಸಂಜೆ 5.30ಕ್ಕೆ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ಡಾ.ರಾಜ್ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕ ನಟರೊಂದಿಗೆ ಶಾಂತಮ್ಮ ನಟಿಸಿದ್ದರು. ಚಿನ್ನಾರಿ ಮುತ್ತ, ಕಂಸಾಳೆ ಕೈಸಾಲೆ, ನಾಂದಿ, ಪಾತರಗಿತ್ತಿ, ಬರ್ಫಿ ಸೇರಿದಂತೆ 400ಕ್ಕೂ ಹೆಚ್ಚು ಕನ್ನಡ, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ಜತೆಗೆ ಹಲವಾರು ಧಾರಾವಾಹಿಗಳಲ್ಲೂ ಶಾಂತಮ್ಮ ನಟಿಸಿದ್ದರು.

- Advertisement -

Latest News

error: Content is protected !!