Wednesday, June 24, 2026
Homeಕರಾವಳಿಬೆಳ್ತಂಗಡಿ : ನೋಟೀಸ್ ನೀಡಲು ವಕೀಲ ಮಂಜುನಾಥ್ ಗಾಗಿ ಹುಡುಕಾಟ; ಪೊಲೀಸರ ಕೈಗೆ ಸಿಗದೇ ವಕೀಲ...

ಬೆಳ್ತಂಗಡಿ : ನೋಟೀಸ್ ನೀಡಲು ವಕೀಲ ಮಂಜುನಾಥ್ ಗಾಗಿ ಹುಡುಕಾಟ; ಪೊಲೀಸರ ಕೈಗೆ ಸಿಗದೇ ವಕೀಲ ಮಂಜುನಾಥ್.ಎನ್ ಕಳ್ಳಾಟ

- Advertisement -
- Advertisement -

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಬಗ್ಗೆ ಸುಳ್ಳು ಪತ್ರಿಕಾ ಪ್ರಕಟಣೆ ಹೊರಡಿಸಿದ ಬೆಂಗಳೂರು ವಕೀಲ ಮಂಜುನಾಥ್.ಎನ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ.22 ರಂದು ಧರ್ಮಸ್ಥಳದ ರಘುರಾಮ್ ಎಂಬವರು ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಬೆಳ್ತಂಗಡಿ  ಪೊಲೀಸ್ ಠಾಣೆಗೆ ವಿಚಾರಣೆಗೆ ಸೆ.1 ರಂದು ಹಾಜರಾಗಲು ನೋಟಿಸ್ ನೀಡಲು ಕಚೇರಿ ಮತ್ತು ಮನೆಗೆ ಬೆಳ್ತಂಗಡಿ ಪೊಲೀಸರು ಕಳೆದ ಎರಡು ದಿನದಿಂದ ಹುಡುಕಾಟ ನಡೆಸಿದರೂ ಎಲ್ಲೂ ಪತ್ತೆಯಾಗುತ್ತಿಲ್ಲ.

ಬೆಳ್ತಂಗಡಿ ಪೊಲೀಸರು ಸೆ.1 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಲು ಆ.30 ಮತ್ತು 31 ರಂದು ಬೆಂಗಳೂರು ಕಾಡುಗೋಡಿಯ, ಬೆಳತ್ತೂರು ಕಚೇರಿ ಮತ್ತು ಬೆಂಗಳೂರು ಪುಟ್ಟೇನಹಳ್ಳಿ ,ವಿನಾಯಕ ಲೇಔಟ್ ನ ನಿವಾಸಕ್ಕೆ ಹೋದರೂ ವಕೀಲ ಮಂಜುನಾಥ್ ಪತ್ತೆಯಾಗಿಲ್ಲ‌. ಇನ್ನೂ ಪೊಲೀಸರ ಜೊತೆ ನೇರ ಕರೆಗೆ ಸಿಗದೆ ವಾಟ್ಸಾಪ್ ಮೂಲಕ ಕರೆಗೆ ಮಾತ್ರ ಸಂಪರ್ಕಕ್ಕೆ ಸಿಕ್ಕಿದಾಗ ಮನೆ ಅಥವಾ ಕಚೇರಿಯ ಸೆಕ್ಯೂರಿಟಿ ಕೈಗೆ ಕೊಟ್ಟು ಹೋಗಿ ಅಂತ ಪೊಲೀಸರ ಮುಂದೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!