Thursday, June 4, 2026
Homeತಾಜಾ ಸುದ್ದಿಮಂಗಳೂರು: ಕಡಲ ಮೀನುಗಾರಿಕೆ ಇಂದಿನಿಂದ ಶುರು: ಸರ್ಕಾರ ವಿಧಿಸಿದ್ದ 61 ದಿನಗಳ ನಿಷೇಧ ನಿನ್ನೆಗೇ ಮುಕ್ತಾಯ

ಮಂಗಳೂರು: ಕಡಲ ಮೀನುಗಾರಿಕೆ ಇಂದಿನಿಂದ ಶುರು: ಸರ್ಕಾರ ವಿಧಿಸಿದ್ದ 61 ದಿನಗಳ ನಿಷೇಧ ನಿನ್ನೆಗೇ ಮುಕ್ತಾಯ

- Advertisement -
- Advertisement -

ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಕಡಲ ಮೀನುಗಾರಿಕೆಗೆ ಸರ್ಕಾರ ವಿಧಿಸಿದ್ದ 61 ದಿನಗಳ ನಿಷೇಧ ನಿನ್ನೆಗೆ ಮುಕ್ತಾಯಗೊಂಡಿದೆ. ಇಂದಿನಿಂದ ಮೀನುಗಾರಿಕೆ ಆರಂಭಗೊಂಡಿದ್ದು, ಮೀನುಗಾರರು ಭರ್ಜರಿ ಸಿದ್ಧತೆಗಳು ನಡೆದಿವೆ.

ಮೀನುಗಾರಿಕೆಗೆ ಬೋಟು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಬಲೆಗಳನ್ನು ಸಿದ್ಧಗೊಳಿಸಲಾಗಿದೆ. ಐಸ್‌ಪ್ಲಾಂಟ್‌ಗಳು ನಿನ್ನೆಯೇ ಕಾರ್ಯಾರಂಭಿಸಿದ್ದು, ಕಡಲಿಗಿಳಿಯುವ ಬೋಟುಗಳಿಗೆ ಮಂಜುಗಡ್ಡೆ ತುಂಬಿಸಲಾಗುತ್ತಿದೆ. ಸರಕಾರದ ತೆರಿಗೆ ರಹಿತ ಡೀಸೆಲ್ ನೀಡುವ ಕಾರ್ಯ ಇಂದಿನಿಂದ ಪ್ರಾರಂಭವಾಗಲಿದೆ.

- Advertisement -

Latest News

error: Content is protected !!