Friday, June 28, 2024
Homeಕರಾವಳಿಮಂಗಳೂರುಮಂಗಳೂರು: ಮೀನಕಳಿಯ ಭಾಗದಲ್ಲಿ ಹೆಚ್ಚಾದ ಕಡಲ್ಕೊರೆತ; ಆತಂಕದಲ್ಲಿ ಸ್ಥಳೀಯ ನಿವಾಸಿಗಳು

ಮಂಗಳೂರು: ಮೀನಕಳಿಯ ಭಾಗದಲ್ಲಿ ಹೆಚ್ಚಾದ ಕಡಲ್ಕೊರೆತ; ಆತಂಕದಲ್ಲಿ ಸ್ಥಳೀಯ ನಿವಾಸಿಗಳು

spot_img
- Advertisement -
- Advertisement -

ಮಂಗಳೂರು: ಮಳೆಯ ಹಿನ್ನೆಲೆಯಲ್ಲಿ ಮಂಗಳೂರಿನ ಮೀನಕಳಿಯ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ.

ಕಡಲ್ಕೊರೆತದಿಂದಾಗಿ ಸುಮಾರು ಹತ್ತರಷ್ಟು ಮನೆಗಳು ಅಪಾಯದಲ್ಲಿದ್ದು, ಮನೆಗಳ ಹತ್ತಿರವೇ ಬೃಹತ್ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ.

ಕಡಲ್ಕೊರೆತ ತಡೆಗಟ್ಟಲು ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಸಮುದ್ರದ ತೀರದಲ್ಲಿ ಮರಳಿನ ಚೀಲಗಳ ಜೋಡಣೆ ಮಾಡಲಾಗಿದೆ.

ಹಿಟಾಚಿ ಯಂತ್ರಗಳನ್ನು ಬಳಸಿ ದೊಡ್ಡ ಗಾತ್ರದ ಮರಳಿನ ಚೀಲಗಳನ್ನು ಜೋಡಿಸಿ ತಾತ್ಕಾಲಿಕವಾಗಿ ಅಲೆಗಳು ಅಪ್ಪಳಿಸದಂತೆ ತಡೆಗೋಡೆ‌ ನಿರ್ಮಿಸಲಾಗುತ್ತಿದೆ.

ರಾತ್ರಿ ವೇಳೆ ಇಲ್ಲಿನ ನಿವಾಸಿಗಳು ಭಯದಿಂದಲೇ ಇರುವಂತಾಗಿದ್ದು, ಕಡಲ್ಕೊರೆತ ತಡೆಗಾಗಿ ಶಾಶ್ವತ ಪರಿಹಾರ ರೂಪಿಸುವಂತೆ ಸ್ಥಳೀಯರಿಂದ ಒತ್ತಾಯ ವ್ಯಕ್ತವಾಗಿದೆ.

ಪ್ರತಿ ವರ್ಷವೂ ಮಳೆಗಾಲದಲ್ಲಿ ಮರಳಿನ ಚೀಲಗಳ ತಾತ್ಕಾಲಿಕ ತಡೆಗೋಡೆ ನಿರ್ಮಾಣ‌ ಮಾಡಲಾಗುತ್ತದೆಯಾದರೂ ನಂತರ ತಡೆಗೋಡೆ ಸಮುದ್ರದ ಅಬ್ಬರಕ್ಕೆ ತಡೆಗೋಡೆ ಕೊಚ್ಚಿಕೊಂಡು ಹೋಗುವುದು ಸಾಮಾನ್ಯವಾಗಿದೆ.

- Advertisement -
spot_img

Latest News

error: Content is protected !!