Sunday, June 7, 2026
Homeತಾಜಾ ಸುದ್ದಿಸಪ್ಟೆಂಬರ್ 21 ರಿಂದ ಶಾಲಾ ಕಾಲೇಜು ಪ್ರಾರಂಭ: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಸಪ್ಟೆಂಬರ್ 21 ರಿಂದ ಶಾಲಾ ಕಾಲೇಜು ಪ್ರಾರಂಭ: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

- Advertisement -
- Advertisement -

ನವದೆಹಲಿ: ಸೆಪ್ಟೆಂಬರ್ 21 ರಿಂದ 9 ರಿಂದ 12 ನೇ ತರಗತಿಗಳಿಗೆ ಶಾಲೆಗಳನ್ನು ಭಾಗಶಃ ಪುನರಾರಂಭಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ವಿದ್ಯಾರ್ಥಿಗಳಿಗೆ ಶಾಲೆಗೆ ಬಂದು ಹೋಗಲು ಶಾಲೆಗಳಲ್ಲಿ ನಿರ್ದಿಷ್ಟ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಅಪಾಯ ಕಡಿಮೆ ಮಾಡಲು ಅನುಸರಿಸಬೇಕಾದ ಸರಳ ಆರೋಗ್ಯ ಕ್ರಮಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಈ ಮಾರ್ಗಸೂಚಿಯಂತೆ ಶಿಕ್ಷಕರು, ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ 6 ಅಡಿ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕಿದೆ. ಇನ್ನೂ ಮುಂದುವರೆದು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು. ಆಗಾಗ ತಪ್ಪದೇ ಹ್ಯಾಂಡ್ ವಾಷ್ ಮಾಡಿಕೊಳ್ಳಬೇಕು. ಸ್ವಯಂ ಆರೋಗ್ಯ ತಪಾಸಣೆಗೂ ಒಳಗಾಗುವಂತೆ ಸೂಚಿಸಿದೆ. ಅಲ್ಲದೇ ಆನ್ ಲೈನ್ ತರಗತಿಯ ಮುಂದುವರಿಕೆಯ ಬಗ್ಗೆಯೂ ಸೂಚನೆ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ಕಂಟೈನ್ಮೆಂಟ್ ಝೋನ್ ನಲ್ಲಿರುವ ಶಾಲೆಗಳು, ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದಂತೆ ಸೂಚನೆ ನೀಡಿದೆ.

- Advertisement -

Latest News

error: Content is protected !!