Thursday, June 4, 2026
Homeಕರಾವಳಿಉಡುಪಿಉಡುಪಿ: ಶಾಲಾ ಮಕ್ಕಳ ಕ್ರಿಸ್ ಮಸ್ ಹಬ್ಬದ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ : ವೀಡಿಯೋ...

ಉಡುಪಿ: ಶಾಲಾ ಮಕ್ಕಳ ಕ್ರಿಸ್ ಮಸ್ ಹಬ್ಬದ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ : ವೀಡಿಯೋ ಹರಿಬಿಟ್ಟವರ ವಿರುದ್ಧ ಸಾರ್ವಜನಿಕರ ಆಕ್ಷೇಪ

- Advertisement -
- Advertisement -

ಉಡುಪಿ: ಕ್ರಿಶ್ಚಿಯನ್ ಶಾಲೆಯಲ್ಲಿ ನಡೆದ ಮಕ್ಕಳ ನೃತ್ಯದ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿರುವ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ‌ ಕ್ರಿಸ್ ಮಸ್ ಹಬ್ಬದ ಹಿನ್ನಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಳೆದ ಶುಕ್ರವಾರ ನಡೆದಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಲೆಗೆ ಕೇಸರಿ ಶಾಲು ಕಟ್ಟಿ ಕೋಮು ವಿಚಾರದಲ್ಲಿ ಹೊಡೆದಾಡಬೇಡಿ ನೃತ್ಯ ರೂಪಕವನ್ನು ನಡೆಸಲಾಗಿತ್ತು

ಈ ನೃತ್ಯ ರೂಪಕವನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಉದ್ದೇಶದಿಂದ ವೀಡಿಯೋ ಹರಿಯ ಬಿಡಲಾಗುತ್ತಿದ್ದು, ಶಾಲಾ ಮಕ್ಕಳ ನೃತ್ಯಕ್ಕೆ ಮತೀಯ ಬಣ್ಣ ಬಳಿಯಲಾಗುತ್ತಿದೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest News

error: Content is protected !!