Wednesday, June 3, 2026
Homeಕರಾವಳಿಕಡಬ;  ನಿಯಂತ್ರಣ ಕಳೆದುಕೊಂಡು ಬೈಕ್ ಅಪಘಾತ, ಬಾಲಕ ಸಾವು

ಕಡಬ;  ನಿಯಂತ್ರಣ ಕಳೆದುಕೊಂಡು ಬೈಕ್ ಅಪಘಾತ, ಬಾಲಕ ಸಾವು

- Advertisement -
- Advertisement -

ಕಡಬ;  ನಿಯಂತ್ರಣ ಕಳೆದುಕೊಂಡು ಬೈಕ್ ಅಪಘಾತವಾಗಿ ಬಾಲಕ ಸಾವನ್ನಪ್ಪಿರುವ ಘಟನೆ ಕಡಬದಲ್ಲಿ ಜನವರಿ 17 ರಂದು ಬೆಳಗ್ಗೆ ನಡೆದಿದೆ.

ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಮೃತ ಬಾಲಕ. ಪೇರಡ್ಕದ ಖಾಸಗಿ ಶಾಲೆಯಲ್ಲಿ  ಹತ್ತನೇ ತರಗತಿ ಓದುತ್ತಿದ್ದ ಬಾಲಕ ತನ್ನ ತಂದೆ ವಿಶ್ವನಾಥ ಅವರೊಂದಿಗೆ ಸಹ ಸವಾರನಾಗಿ ಶುಕ್ರವಾರ ಮುಂಜಾನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪದ ಗರ್ಗಸ್ ಪಾಲ್ ಎಂಬಲ್ಲಿ ಬೈಕ್ ನಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮೋರಿಗೆ  ಢಿಕ್ಕಿ ಹೊಡೆದು ಪಲ್ಟಿಯಾಗಿದೆ.ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕೂಡಲೇ ಸ್ಥಳೀಯರು  ಬಾಲಕನನ್ನು ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!