Friday, June 5, 2026
Homeಕರಾವಳಿಬೆಳ್ತಂಗಡಿಯ ಮೂರುಗೋಳಿಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿ

ಬೆಳ್ತಂಗಡಿಯ ಮೂರುಗೋಳಿಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿ

- Advertisement -
- Advertisement -

ಬೆಳ್ತಂಗಡಿಯ ಮೂರುಗೋಳಿಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾಗಿದೆ. ಪರಿಣಾಮ ಎಂಟು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕಲ್ಲೇರಿ ಆಸುಪಾಸಿನಿಂದ ಮೂಡಡ್ಕದ ಅಲ್ ಮದೀನಾತುಲ್ ಮುನಾವರ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಅಟೋ ರಿಕ್ಷಾಕ್ಕೆ ಮೂರುಗೋಳಿ ಬಳಿ ಪಲ್ಟಿಯಾಗಿದೆ.

ದ್ವಿಚಕ್ರ ವಾಹನವೊಂದು ಅಡ್ಡ ಬಂದಿದ್ದು, ಈ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡ ಅಟೋ ರಿಕ್ಷಾ ಮಗುಚಿ ಬಿದ್ದಿದೆ ಎನ್ನಲಾಗಿದೆ. 8 ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.   ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

- Advertisement -

Latest News

error: Content is protected !!