Friday, May 3, 2024
Homeತಾಜಾ ಸುದ್ದಿವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಗೆ ಷರತ್ತುಬದ್ದ ಅನುಮತಿ ನೀಡಿದ ಸುಪ್ರೀಂ ಕೋರ್ಟ್

ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಗೆ ಷರತ್ತುಬದ್ದ ಅನುಮತಿ ನೀಡಿದ ಸುಪ್ರೀಂ ಕೋರ್ಟ್

spot_img
- Advertisement -
- Advertisement -

ನವದೆಹಲಿ: ಕೊರೋನಾ ಸೋಂಕಿನ ಕಾರಣದಿಂದ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯನ್ನು ಈ ಬಾರಿ ನಡೆಸಬಾರದು ಎಂದು ನೀಡಿದ್ದ ತೀರ್ಪನ್ನು ಹಿಂಪಡೆಯುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲಾಗಿತ್ತು. ಇಂದು ಈ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸರ್ವೋಚ್ಛ ನ್ಯಾಯಾಲಯ, ಜಗದ್ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯನ್ನು ನಡೆಸಲು ಷರತ್ತುಬದ್ದ ಅನುಮತಿ ನೀಡಿದೆ.

ರಥಯಾತ್ರೆ”ಸೂಕ್ಷ್ಮವಾಗಿ ನಿರ್ವಹಿಸಲು” ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಅಲ್ಲದೆ ದೇವಾಲಯ ರಥಯಾತ್ರೆ ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಮತ್ತು ದೇವಾಲಯ ನಿರ್ವಹಣೆ ಮಂಡಳಿಗೆ ವಹಿಸಿದೆ.

ಇದರೊಡನೆ ಸುಪ್ರಸಿದ್ದ ಪುರಿ ಜಗನ್ನಾಥ ರಥ ಯಾತ್ರೆಗೆ ಹಾದಿ ಸುಗಮವಾಗಿದೆ. ಆದರೆ ನ್ಯಾಯಾಲಯ ಕೆಲ ಷರತ್ತು ಸಹ ವಿಧಿಸಿದೆ. ಭಕ್ತರು ಇಲ್ಲದೆಯೇ ರಥಯಾತ್ರೆ ನಡೆಸಬೇಕು, ರಥಯಾತ್ರೆ ಕೈಂಕರ್ಯದ ನೇರ ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

- Advertisement -
spot_img

Latest News

error: Content is protected !!