Sunday, May 5, 2024
Homeತಾಜಾ ಸುದ್ದಿಬ್ರಾ ಸೈಜ್​ ಕೇಳಿದವನಿಗೆ ಖಡಕ್ ಉತ್ತರ ಕೊಟ್ಟ ಸತ್ಯವತಿ ಖ್ಯಾತಿಯ ನಟಿ

ಬ್ರಾ ಸೈಜ್​ ಕೇಳಿದವನಿಗೆ ಖಡಕ್ ಉತ್ತರ ಕೊಟ್ಟ ಸತ್ಯವತಿ ಖ್ಯಾತಿಯ ನಟಿ

spot_img
- Advertisement -
- Advertisement -

ಮುಂಬೈ: ಕಿರುತೆರೆಯ ಮಹಾಭಾರತದಲ್ಲಿ ಸತ್ಯವತಿ ಪಾತ್ರದಲ್ಲಿ ಗಮನ ಸೆಳೆದಿದ್ದ ನಟಿ ಸಯಂತನಿ ಘೋಷ್ ಸೋಶಿಯಲ್​ ಮೀಡಿಯಾದಲ್ಲಿ ಬ್ರಾ ಸೈಜ್​ ಕೇಳಿದ ಕಿಡಿಗೇಡಿಗೆ ಮಾತಿನಲ್ಲೇ ಗುನ್ನಾ ನೀಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸುದೀರ್ಘ ಬರಹದ ಪೋಸ್ಟ್​​ನ್ನು ಸಯಂತಿನಿ ಶೇರ್​ ಮಾಡಿದ್ದಾರೆ. “ಇಂದು ನಾವು ವಿಶ್ವ ಆರೋಗ್ಯ ದಿನ ಆಚರಿಸಿದ್ದೇವೆ. ಆದರೆ, ನಿಮಗೆ ತಿಳಿದಿದೆ ಮಾನಸಿಕ ಆರೋಗ್ಯವು ಈಗ ಆರೋಗ್ಯದ ಪ್ರಮುಖ ಅಂಶವಾಗಿದೆ. ಹೌದು ನಿಮ್ಮ ದೇಹದ ಅಂಗಗಳನ್ನು ಫಿಟ್ ಆಗಿ ಇಟ್ಟುಕೊಳ್ಳಿ. ಆದರೆ, ನಿಮ್ಮ ಮನಸ್ಸನ್ನು ಮರೆಯಬೇಡಿ. ನಿನ್ನೆ ಸಂದರ್ಶನದ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿ ನನ್ನ ಬ್ರಾ ಸೈಜ್​ ಕೇಳಿದ್ದಾರೆ. ನಾನು ಆ ವ್ಯಕ್ತಿಗೆ ಅಲ್ಲೇ ಸರಿಯಾದ ಉತ್ತರವನ್ನ ನೀಡಿದೆ. ಆದರೂ ನನಗೆ ಈ ವಿಚಾರವಾಗಿ ಮಾತನಾಡೋದು ಬಹಳಷ್ಟಿದೆ ಎಂದೆನಿಸಿತು. ಯಾವುದೇ ರೀತಿಯಲ್ಲಿ ಇನ್ನೊಬ್ಬರ ಅಂಗಾಂಗದ ಬಗ್ಗೆ ಆಡಿಕೊಳ್ಳೋದು ಒಳ್ಳೆಯದಲ್ಲ. ಎದೆ ದೇಹದ ಒಂದು ಅಂಗ ಎಂದು ಭಾವಿಸಿಕೊಳ್ಳಲು ಏಕೆ ಸಾಧ್ಯವಿಲ್ಲ..? ಹೆಣ್ಣುಮಕ್ಕಳ ಎದೆಯ ಬಗ್ಗೆ ಅಷ್ಟೊಂದು ವಿಭಿನ್ನವಾಗಿ ಕಾಣೋದು ಯಾಕೆ..? ಎಂದು ಪ್ರಶ್ನೆ ಮಾಡಿದ್ದಾರೆ.

ಪುರುಷರಿಗೆ ಈ ಅಧಿಕಾರವನ್ನ ನೀಡಿದವರು ಯಾರು..? ಎಷ್ಟೋ ಬಾರಿ ಮರ್ಯಾದೆಗೆ ಅಂಜಿ ಹೆಣ್ಣುಮಕ್ಕಳು ಇಂತಹ ಟೀಕೆಗಳ ಬಗ್ಗೆ ಮೌನ ವಹಿಸಿಬಿಡ್ತಾರೆ. ನಾನು ಕೂಡ ಎಷ್ಟೋ ಬಾರಿ ಪುರುಷನೊಬ್ಬ ನನ್ನ ಎದೆಯನ್ನ ಗುರಾಯಿಸುತ್ತಿದ್ದಾನೆ ಎಂದು ಗೊತ್ತಾದ ಬಳಿಕವೂ ಇರುಸುಮುರುಸು ಉಂಟಾಗಿದ್ದರಿಂದ ಅದರ ಬಗ್ಗೆ ಮಾತನಾಡದೇ ಸುಮ್ಮನಾಗಿದ್ದೇನೆ. ಆದರೆ ಇದೀಗ ಅತಿಯಾಗಿದೆ. ನಮಗಾಗಿ ನಾವು ನಿಂತುಕೊಳ್ಳಲೇಬೇಕು. ಯಾಕೆಂದರೆ ಇಂತಹ ಸಮಸ್ಯೆಗಳನ್ನ ಪರಿಹಾರ ಮಾಡೋಕೆ ಬೇರ್ಯಾರೂ ಬರೋದಿಲ್ಲ. ನಿಮ್ಮ ಅಂಗಾಂಗವನ್ನ ಅಗೌರವಿಸುವ ಯಾವುದೇ ಪುರುಷ ಹಾಗೂ ಮಹಿಳೆಯ ವಿರುದ್ಧ ಧ್ವನಿಯೆತ್ತುವ ಅಧಿಕಾರ ನಿಮಗಿದೆ ಎಂದು ಬರೆದುಕೊಂಡಿದ್ದಾರೆ.

ಬಾಡಿ ಶೇಮಿಂಗ್ ನಿಲ್ಲಿಸಲು ಸಯಂತನಿ ತನ್ನ ಪೋಸ್ಟ್‌ನಲ್ಲಿ ಹಲವು ವಿವರಣೆ ಕೊಟ್ಟಿದ್ದಾರೆ. ಸ್ವಯಂ ಸ್ವೀಕಾರ ಮತ್ತು ಮಾತನಾಡುವ ತಮ್ಮ ತಿಳುವಳಿಕೆಯ ಬಗ್ಗೆ ಸುದೀರ್ಘ ಟಿಪ್ಪಣಿ ಬರೆದಿದ್ದಾರೆ. ‘ಹೆಂಗಸರು, ನಾವು ನಮ್ಮನ್ನು ಪ್ರೀತಿಸಲು ಮತ್ತು ನಮಗಾಗಿ ನಿಲ್ಲಲು ಪ್ರಾರಂಭಿಸುವ ಸಮಯ ಇದು. ಬೇರೆ ಯಾರೂ ಆಗುವುದಿಲ್ಲ’ ಎಂದು ಹೇಳಿದ್ದಾರೆ. ಇದರ ಜೊತೆಗೆ ಮತ್ತಷ್ಟು ವ್ಯಂಗ್ಯದ ಪೋಸ್ಟ್‌ಗಳು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿವೆ.

- Advertisement -
spot_img

Latest News

error: Content is protected !!