Wednesday, July 2, 2025
Homeಕರಾವಳಿಮಂಗಳೂರುಬೆಳ್ತಂಗಡಿ: ಸವಣಾಲು ಶ್ರೀ ಕೊಡಮಣಿತ್ತಾಯ ನೇಮೋತ್ಸವಕ್ಕೆ ಗೊನೆ  ಮುಹೂರ್ತ

ಬೆಳ್ತಂಗಡಿ: ಸವಣಾಲು ಶ್ರೀ ಕೊಡಮಣಿತ್ತಾಯ ನೇಮೋತ್ಸವಕ್ಕೆ ಗೊನೆ  ಮುಹೂರ್ತ

spot_img
- Advertisement -
- Advertisement -

ಬೆಳ್ತಂಗಡಿ: ಸವಣಾಲು ಗ್ರಾಮದ ಗಡು ಹಾಕಿದ ಸ್ಥಳ ಮಂಜದಬೆಟ್ಟುವಿನಲ್ಲಿ ಪ್ರತೀ ವರ್ಷದಂತೆ ಮಾರ್ಚ್ 23 ಮತ್ತು 24 ರಂದು ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ಹಾಗು ಅಮ್ಮನವರ ಜಾತ್ರೋತ್ಸವ ಪ್ರಯುಕ್ತ ಪಿಲಿಚಾಂಮುಂಡಿ ದೈವದ ಪರ್ವ ಸೇವೆ ,ಗೊನೆ ಮುಹೂರ್ತ, ಚಪ್ಪರ ಮುಹೂರ್ತ, ಕೋಳಿ ಗೂಟ ಮತ್ತು ಚೆಂಡು ಹಾಕುವ ಕಾರ್ಯಕ್ರಮ 21 ಮಾರ್ಚ್ ಶುಕ್ರವಾರ ಮಂಜದಬೆಟ್ಟುವಿನಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷ ಚಿದಾನಂದ ಶೆಟ್ಟಿ ಹೇರಾಜೆ , ಕಾರ್ಯದರ್ಶಿ ಪುರಂದರ ಪೂಜಾರಿ ಕಟ್ಟದ ಬೈಲು , ಗೌರವಾಧ್ಯಕ್ಷ ರಘುರಾಮ್ ಗಾಂಭೀರ ಬೊಲ್ಲೊಟ್ಟು ಗುತ್ತು ,ಕೋಶಾಧಿಕಾರಿ ಲೋಕನಾಥ್ ಶೆಟ್ಟಿ ಅಂಗರ್ದೋಟ್ಟು,ಲೆಕ್ಕ ಪರಿಶೋಧಕ ಮೋಹನ್ ರೈ ದೋಲ್ದೊಟ್ಟು, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಸುಲ್ಯೊಡಿ ಮತ್ತು ರವಿ ಪೂಜಾರಿ ಮಂಜದಬೆಟ್ಟು, ಜೊತೆ ಕಾರ್ಯದರ್ಶಿ ರಾಜು ಬಿ ಶೆಟ್ಟಿ ಮಂಜದಬೆಟ್ಟು ಸೇರಿದಂತೆ ಗ್ರಾಮದ ಗುತ್ತು ಬರ್ಕೆಯವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ .

- Advertisement -
spot_img

Latest News

error: Content is protected !!