Sunday, June 7, 2026
Homeಕರಾವಳಿಮಂಗಳೂರು: ರಾಜ್ಯದ ಕರಾವಳಿ ಹಾಗು ಮಲೆನಾಡು ಭಾಗದಲ್ಲಿ ಮತ್ತೇ ರಿಂಗಣಿಸಿದ ಸ್ಯಾಟಲೈಟ್ ಫೋನ್

ಮಂಗಳೂರು: ರಾಜ್ಯದ ಕರಾವಳಿ ಹಾಗು ಮಲೆನಾಡು ಭಾಗದಲ್ಲಿ ಮತ್ತೇ ರಿಂಗಣಿಸಿದ ಸ್ಯಾಟಲೈಟ್ ಫೋನ್

- Advertisement -
- Advertisement -

ಮಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸ್ಯಾಟಲೈಟ್ ಫೋನ್ ಮತ್ತೊಮ್ಮೆ ರಿಂಗಣಿಸಿರುವ ಗುಪ್ತಚರ ಇಲಾಖೆ ಹೈ ಅಲರ್ಟ್ ಘೋಷಿಸಿದೆ.

ಐದಕ್ಕೂ ಹೆಚ್ಚು ಕಡೆ ಸ್ಯಾಟಲೈಟ್‌ ಫೋನ್‌ ಕರೆ ಸಕ್ರಿಯ ಆಗಿರುವುದು ಬೆಳಕಿಗೆ ಬಂದಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದಿರುವ ಬಗ್ಗೆ ಕೇಂದ್ರ ಬೇಹುಗಾರಿಕಾ ಸಂಸ್ಥೆಗಳು ಮಾಹಿತಿ ಕಲೆಹಾಕುತ್ತಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಮತ್ತು ಮುಡಿಪು, ಚಿಕ್ಕಮಗಳೂರಿನ ಎರಡು ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟಅರಣ್ಯ ಪ್ರದೇಶದಲ್ಲಿ ಒಂದು ವಾರದ ಹಿಂದೆ ಸ್ಯಾಟಲೈಟ್‌ ಫೋನ್‌ ಆ್ಯಕ್ಟಿವ್‌ ಆಗಿರುವ ಮಾಹಿತಿ ಲಭಿಸಿದೆ.

ಕೇಂದ್ರ ಗುಪ್ತಚರ ವಿಭಾಗ ಒಂದು ವರ್ಷದಿಂದ ಈ ಬಗ್ಗೆ ನಿಗಾ ಇರಿಸಿದ್ದು, ಒಂದೇ ವರ್ಷದಲ್ಲಿ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆಯಾಗುತ್ತಿರುವುದು ಇದು ಮೂರನೇ ಬಾರಿ. ಈ ವಿಚಾರ ಇತ್ತೀಚೆಗೆ ವಿಧಾನಮಂಡಲ ಅಧಿವೇಶನದಲ್ಲೂ ಪ್ರಸ್ತಾಪಗೊಂಡಿತ್ತು. ಗೃಹ ಸಚಿವರು ಸ್ಯಾಟಲೈಟ್‌ ಫೋನ್‌ ಕರೆ ಬಗ್ಗೆ ಸದನದಲ್ಲಿ ಮಾತನಾಡಿದ್ದರು.

ಹೈಅಲರ್ಟ್‌ ನಡುವೆಯೂ ರಾಜ್ಯದಲ್ಲಿ ಸ್ಯಾಟಲೈಟ್‌ ಫೋನ್‌ಗಳು ಮತ್ತೆ ಆ್ಯಕ್ಟಿವ್‌ ಆಗಿರುವ ಬಗ್ಗೆ ಗುಪ್ತಚರ ವಿಭಾಗ ತನಿಖೆ ಚುರುಕುಗೊಳಿಸಿದೆ. ರಾಜ್ಯದ ಐದು ಕಡೆ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆಯಾಗಿದೆ. ಸ್ಯಾಟಲೈಟ್‌ ಫೋನ್‌ ಮೂಲಕ ಅಪರಿಚಿತರು ಸಂಪರ್ಕ ಸಾಧಿಸುತ್ತಿದ್ದು, ಯಾರೊಂದಿಗೆ, ಯಾರಾರ‍ಯರು ಸಂಪರ್ಕದಲ್ಲಿ ಇದ್ದಾರೆ ಎಂಬ ಮಾಹಿತಿ ಇನ್ನೂ ನಿಗೂಢವಾಗಿಯೇ ಇದೆ.

- Advertisement -

Latest News

error: Content is protected !!