Wednesday, June 24, 2026
Homeಕರಾವಳಿಮಂಗಳೂರುಮಹಿಳಾ ದಿನಾಚರಣೆ ಅಂಗವಾಗಿ ಮಂಗಳೂರಿನಲ್ಲಿ ಸೀರೆ ಓಟದ ಸ್ಫರ್ಧೆ

ಮಹಿಳಾ ದಿನಾಚರಣೆ ಅಂಗವಾಗಿ ಮಂಗಳೂರಿನಲ್ಲಿ ಸೀರೆ ಓಟದ ಸ್ಫರ್ಧೆ

- Advertisement -
- Advertisement -

ಮಂಗಳೂರು: ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮಹಿಳೆಯರಿಗೆ ಸೀರೆ ಧರಿಸಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಕೆ.ಎಸ್. ರಾವ್ ರಸ್ತೆಯಿಂದ ಸುಮಾರು ಮೂರು ಕಿಲೋ ಮೀಟರ್ ದೂರ ಓಟದ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಮಹಿಳೆಯರು
ರಸ್ತೆಯಲ್ಲಿ ಓಟದ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.

ನವಭಾರತ್ ಸರ್ಕಲ್, ಪಿವಿಎಸ್ ವೃತ್ತ, ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ ನಡೆದ ಓಟದ ಸ್ಫರ್ಧೆಯಲ್ಲಿ ವಿಜೇತರಿಗೆ ಬಹುಮಾನ ಮತ್ತು ಪದಕಗಳನ್ನು ವಿತರಿಸಲಾಯಿತು.

ಓಟದ ಸ್ಪರ್ಧೆಗೂ ಮೊದಲು ಚಲನಚಿತ್ರ ಗೀತೆಗಳಿಗೆ ಮಹಿಳೆಯರು ನೃತ್ಯ ಮಾಡಿದ್ದು ಗಮನ ಸೆಳೆಯಿತು‌.

- Advertisement -

Latest News

error: Content is protected !!