ಬೆಂಗಳೂರು: ಚಂದನವನದ ಗಂಡ ಹೆಂಡತಿ ಚಿತ್ರ ಖ್ಯಾತಿಯ ಸಂಜನಾ ನಟಿ ನೋಡಿದಷ್ಟು ಸಾಚಾ ಅಲ್ಲ ಅನ್ನುವುದು ದಿನ ಕಳೆದಂತೆ ಬಯಲಾಗುತ್ತಿದೆ. ಆಕೆಗಿದ್ದ ಸಂಬಂಧಗಳು ತನಿಖಾಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.ಸಂಜನಾಳಿಗೆ ಕೇವಲ ರಾಜಕಾರಣಿಗಳು ಮಾತ್ರವಲ್ಲ ಅಧಿಕಾರಿಗಳ ಮಟ್ಟದಲ್ಲೂ ಸಂಬಂಧವಿತ್ತು ಅನ್ನುವುದು ಗೊತ್ತಾಗಿದೆ.
ಸಂಜನಾ ಗಲ್ರಾನಿ ಬಂಧಿಸದಂತೆ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ಒತ್ತಡ ಹೇರಿದ್ದರು ಅನ್ನುವ ಮಾಹಿತಿ ಹೊರ ಬಿದ್ದಿದೆ. ಸಂಜನಾ ಜೊತೆ ಈ ಅಧಿಕಾರಿ 3 ವರ್ಷದಿಂದ ಸಂಬಂಧ ಹೊಂದಿದ್ದು, ಸಂಜನಾ ಮನೆ ಮೇಲೆ ಸಿಸಿಬಿ ದಾಳಿ ವೇಳೆ ಆ ಐಎಎಸ್ ಅಧಿಕಾರಿಗೆ ಸೇರಿದ ಚೆಕ್‌ಗಳು ಪತ್ತೆಯಾಗಿದ್ದವು.
ಇನ್ನು ಸಂಜನಾ ಬಂಧನದ ಪ್ರಯತ್ನ ವಿಫಲವಾಗುತ್ತಿದ್ದಂತೆ ಬಂಧನ ಬಳಿಕ ಅವಳಿಗೆ ಟಾರ್ಚರ್ ನೀಡಬೇಡಿ ಎಂದು ಐಎಎಸ್ ಅಧಿಕಾರಿ ಒತ್ತಡ ಹೇರಿದ್ದಾರಂತೆ. ಕೆಲ ದಿನ ಕಾದರೆ ಅ ಅಧಿಕಾರಿ ಯಾರು ಅನ್ನೋದು ಗೊತ್ತಾಗುತ್ತದೆ, ಅವರ ಮನೆಯಲ್ಲೇ ಈ ವಿಚಾರಕ್ಕೆ ದೊಡ್ಡದೊಂದು ಗಲಾಟೆ ನಡೆದರೂ ಅಚ್ಚರಿ ಇಲ್ಲ


