Friday, April 26, 2024
Homeತಾಜಾ ಸುದ್ದಿಆನೆಯ ಬೆನ್ನ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್; ಮಾಡೆಲ್ ಮಂಗಾಟದ ವೀಡಿಯೋ ವೈರಲ್

ಆನೆಯ ಬೆನ್ನ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್; ಮಾಡೆಲ್ ಮಂಗಾಟದ ವೀಡಿಯೋ ವೈರಲ್

spot_img
- Advertisement -
- Advertisement -

ಬಾಲಿ: ಆನೆ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಹುಚ್ಚಾಟ ಮೆರೆದ ರಷ್ಯಾದ ಸಾಮಾಜಿಕ ಜಾಲತಾಣ ಸೆಲೆಬ್ರಿಟಿ ಮಾಡೆಲ್​ ಅಲೆಸ್ಯಾ ಕಫೆಲ್ನಿಕೋವಾ (22) ಇದೀಗ ಪ್ರಾಣಿಪ್ರೀಯರ ಟೀಕೆಗೆ ಗುರಿಯಾಗಿದ್ದಾಳೆ.

ಅಲೆಸ್ಯಾ, ವಿಶ್ವದ ನಂ. 1 ಮಾಜಿ ಟೆನ್ನಿಸ್​ ಆಟಗಾರ ಯೆವ್ಗೆನಿ ಕಫೆಲ್ನಿಕೋವಾರ ಮಗಳು. ಇಂಡೋನೇಷ್ಯಾದಲ್ಲಿ ಅಳಿವಂಚಿನಲ್ಲಿರುವ ಸುಮ್ರಾತ್‍ನ್ ಆನೆ ಮೇಲೆ ವಿಭಿನ್ನ ಅವತಾರಗಳಲ್ಲಿ ಫೋಟೋ ಮಾತ್ರವಲ್ಲದೆ, ಬೆತ್ತಲೆ ಮಲಗಿರುವ ಸಣ್ಣ ವಿಡಿಯೋ ತುಣುಕನ್ನು ಸಹ ಅಲೆಸ್ಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಕೆಲದಿನಗಳ ಹಿಂದೆ ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ ನ್ಯಾಚುರಲ್​ ವೈಬ್ಸ್​ ಎಂದು ಅಡಿಬರಹ ನೀಡಿದ್ದಾರೆ. ಸಾಕಷ್ಟು ಟೀಕೆಗಳು ವ್ಯಕ್ತವಾದ ಬಳಿಕ ಅಲೆಸ್ಯಾ ಇನ್​ಸ್ಟಾಗ್ರಾಂನಿಂದ ಆ ವಿಡಿಯೋ ಡಿಲೀಟ್​ ಮಾಡಿದ್ದಾರೆ.

ಅಲೆಸ್ಯ ಅವರ ಬೆತ್ತಲೆ ಫೋಟೋಶೂಟ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ವಿಡಿಯೋ ಕಂಡು ಭಾರೀ ವಿರೋಧ ವ್ಯಕ್ತಿ ಪಡಿಸಿದ್ದಾರೆ. ಅಲ್ಲದೆ, ಮಾಡೆಲ್​ ಹುಚ್ಚಾಟವನ್ನು ಕಂಡು ಸಿಟ್ಟಾಗಿದ್ದಾರೆ. ಇನ್ನು ಪ್ರಾಣಿದಯಾ ಸಂಘ ಮತ್ತು ಪರಿಸರ ಪ್ರೇಮಿಗಳು ಕೂಡ ಮಾಡೆಲ್​ ವರ್ತನೆಗೆ ಖಂಡನೆ ವ್ಯಕ್ತ ಪಡಿಸಿದ್ದಾರೆ. ಈ ವಿಚಾರ ಆಕೆಗೆ ತಿಳಿದಂತೆ ಇನ್​​ಸ್ಟಾಗ್ರಾಂನಿಂದ ವಿಡಿಯೋ ಡಿಲೀಟ್​ ಮಾಡಿದ್ದಾರೆ.

- Advertisement -
spot_img

Latest News

error: Content is protected !!