Sunday, June 7, 2026
Homeಅಪರಾಧಮಂಗಳೂರು : ಮೊಬೈಲ್ ಅಂಗಡಿಯಲ್ಲಿ ಕಳವು !!

ಮಂಗಳೂರು : ಮೊಬೈಲ್ ಅಂಗಡಿಯಲ್ಲಿ ಕಳವು !!

- Advertisement -
- Advertisement -

ಮಂಗಳೂರು : ಸಾವಿರಾರು ರೂ. ಬೆಲೆಬಾಳುವ ಮೊಬೈಲ್ ಫೋನ್‌ಗಳು ಮೊಬೈಲ್ ಅಂಗಡಿಯೊಂದರಿಂದ ಕಳವಾದ ಘಟನೆ ಹಳೆಯಂಗಡಿ ಗ್ರಾಮದ ಪಂಡಿತ್ ಹರಿಭಟ್ ಎಂಬಲ್ಲಿ ಬುಧವಾರ ನಡೆದಿದೆ.

ಸುನಿಲ್ ಗಂಗಾಧರ್ ಪೂಜಾರಿ ಎಂಬವರಿಗೆ ಸೇರಿದ ದುರ್ಗಾ ಭಗವತಿ ಎಂಟರ್ ಪ್ರೈಸೆಸ್ ಎಂಬ ಮೊಬೈಲ್ ಅಂಗಡಿಯಲ್ಲಿ ಈ ಕಳವು ನಡೆದಿದೆ.

ಅಂಗಡಿಯ ಮೇಲ್ಛಾವಣಿಯಲ್ಲಿ ಅಳವಡಿಸಿದ ತಗಡು ಶೀಟನ್ನು ಸರಿಸಿ ಒಳನುಗ್ಗಿದ್ದಾರೆ. ಸುಮಾರು 60,635 ರೂ. ಮೌಲ್ಯದ ಮೊಬೈಲ್ ಫೋನ್‌ಗಳನ್ನು, ಸಿಸಿಟಿವಿ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!