Monday, May 6, 2024
Homeತಾಜಾ ಸುದ್ದಿಮತ್ತೆ ಏರಿಕೆಯತ್ತ ಮುಖಮಾಡಿದ ಇಂಧನ ಬೆಲೆ- ಕೋವಿಡ್-19 ಲಸಿಕೆ ಅನ್ವೇಷಣೆ ಪರೋಕ್ಷ ಕಾರಣ?

ಮತ್ತೆ ಏರಿಕೆಯತ್ತ ಮುಖಮಾಡಿದ ಇಂಧನ ಬೆಲೆ- ಕೋವಿಡ್-19 ಲಸಿಕೆ ಅನ್ವೇಷಣೆ ಪರೋಕ್ಷ ಕಾರಣ?

spot_img
- Advertisement -
- Advertisement -

ಹೊಸದಿಲ್ಲಿ: ಕಳೆದಎರಡು ವಾರಗಳಿಂದ ಇಂಧನ ಬೆಲೆ ಏರಿಕೆಯತ್ತ ಮುಖ ಮಾಡಿದ್ದು ಪೆಟ್ರೋಲ್ ಬೆಲೆ ಶೇಕಡ 4 ಮತ್ತು ಡೀಸೆಲ್ ಬೆಲೆ ಶೇಕಡ 5ರಷ್ಟು ಹೆಚ್ಚುವ ಮೂಲಕ ಜನಸಾಮಾನ್ಯರಿಗೆ ಇಂಧನ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಕೋವಿಡ್-19 ಲಸಿಕೆ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ಈ ವಿಷಯ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಪರೋಕ್ಷ ಕಾರಣ ಎನ್ನಲಾಗುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಇಂಧನ ಬೆಲೆಯಲ್ಲಿ ಅಧಿಕ ತೆರಿಗೆ ಹೇರುತ್ತಿದೆ. ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಬೆಲೆ ಪರಿಷ್ಕರಣೆಯನ್ನು ಮತ್ತೆ ಆರಂಭಿಸಿದಾಗಿನಿಂದ ಪೆಟ್ರೋಲ್ 2.65 ರೂಪಾಯಿ ಮತ್ತು ಡೀಸೆಲ್ 3.41 ರೂಪಾಯಿನಷ್ಟು ಏರಿಕೆ ಕಂಡಿದೆ.

ಇಂದು ಇಂಧನ ಬೆಲೆ ಪ್ರತಿ ಬ್ಯಾರಲ್‌ಗೆ 48.61 ಡಾಲರ್ ಇದ್ದು ಇದು ಮಾರ್ಚ್ ಬಳಿಕದ ಅತ್ಯಧಿಕ ದರವಾಗಿದೆ.ಇಂಧನ ಬೆಲೆಯನ್ನು ಜಾಗತಿಕ ಮಟ್ಟದಲ್ಲಿ ಶುದ್ಧೀಕರಿಸಿದ ಉತ್ಪನ್ನಗಳಿಗೆ ಕಳೆದ 15 ದಿನಗಳಲ್ಲಿ ಇದ್ದ ಬೆಲೆಯ ಸರಾಸರಿ ಬೆಲೆ ಮತ್ತು ಡಾಲರ್ ವಿನಿಮಯ ದರವನ್ನು ಪರಿಗಣನೆಗೆ ತಂದುಕೊಂಡುಬಿ ಗಮನಿಸಿದರೆ ಮುಂದಿನ ಕೆಲ ದಿನಗಳವರೆಗೆ ಬೆಲೆ ಏರುಗತಿಯಲ್ಲಿ ಇರಲಿದೆ ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!