- Advertisement -
- Advertisement -
ಮಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ಡ್ರಾಮಾ ಜೂನಿಯರ್ ವಿಜೇತೆ, ಯಕ್ಷಗಾನ ಬಾಲ ಕಲಾವಿದೆ ರಿಷಿಕಾ ಕುಂದೇಶ್ವರ ಅವರು ಕುರಿತು ವಿಠಲ ಶಾಸ್ತ್ರಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ಉಜಿರೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ ಬೆಳ್ತಂಗಡಿ ಲಾಯಿಲ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಭವನದಲ್ಲಿ ಸೆ.30 ಸೋಮವಾರದಂದು ಸಂಜೆ 4.45ಕ್ಕೆ ಹಮ್ಮಿಕೊಂಡಿರುವ ಯಶೋಯಕ್ಷನಮನ, ಗಾನ, ನೃತ್ಯ ಚಿತ್ರ ಕಾರ್ಯಕ್ರಮದಲ್ಲಿ ಪ್ರದಾನಿಸಲಾಗುವುದು ಎಂದು ಸಂಚಾಲಕ ಉಜಿರೆ ಅಶೋಕ್ ಭಟ್ ತಿಳಿಸಿದ್ದಾರೆ.
- Advertisement -