Thursday, June 4, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; ಮೈಸೂರಿನಲ್ಲಿ ಹೆಲ್ಮೆಟ್ ಧರಿಸದೇ ವಾಹನ ಓಡಿಸಿದ್ದೀರೆಂದು ರಿಕ್ಷಾ ಚಾಲಕನಿಗೆ ದಂಡ

ಉಪ್ಪಿನಂಗಡಿ; ಮೈಸೂರಿನಲ್ಲಿ ಹೆಲ್ಮೆಟ್ ಧರಿಸದೇ ವಾಹನ ಓಡಿಸಿದ್ದೀರೆಂದು ರಿಕ್ಷಾ ಚಾಲಕನಿಗೆ ದಂಡ

- Advertisement -
- Advertisement -

ಉಪ್ಪಿನಂಗಡಿ; ಮೈಸೂರಿನಲ್ಲಿ ಹೆಲ್ಮೆಟ್ ಧರಿಸದೇ ವಾಹನ ಓಡಿಸಿದ್ದೀರೆಂದು ಉಪ್ಪಿನಂಗಡಿಯ ರಿಕ್ಷಾ ಚಾಲಕನಿಗೆ ದಂಡ ಪಾವತಿಸುವಂತೆ ಮೆಸೇಜ್ ಬಂದ ವಿಚಿತ್ರ ಪ್ರಸಂಗ ನಡೆದಿದೆ.
ಕೆಎ.21B 3862 ನಂಬರಿನ ಅಟೋ ಚಾಲಕ ರೋಹಿತ್ ನಂಬರಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಇ ಚಲನ್ ನಿಂದ ಮೆಸೇಜ್ ಬಂದಿದೆ. 500 ರೂಪಾಯಿ ದಂಡ ಪಾವತಿಸುವಂತೆ ತಿಳಿಸಲಾಗಿದೆ.
ಉಪ್ಪಿನಂಗಡಿಯ ಪೆರಿಯಡ್ಕದ ಆಟೋ ಚಾಲಕರಾಗಿರು ರೋಹಿತ್ ಮೊಬೈಲ್ ಗೆ ಈ ಮೇಸೆಜ್ ಬಂದಿದ್ದು. ಮೆಸೇಜ್ ಓದಿ ದಂಗಾಗಿದ್ದಾರೆ.

ರೋಹಿತ್ ಹತ್ರ ಆಟೋ ಬಿಟ್ಟರೆ ಬೇರೆ ದ್ವಿಚಕ್ರ ವಾಹನವಿಲ್ಲ, ಅಲ್ಲದೆ ಮೈಸೂರು ಜಿಲ್ಕೆಯ ತಲಕಾಡು ಜಂಕ್ಷನ್ ನಲ್ಲಿ ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದೀರಿ ಎನ್ನುವ ಮೆಸೇಜ್ ಬೇರೆ ಬಂದಿದೆ. ಎಐ ಕ್ಯಾಮರಾದ ಯಡವಟ್ಟೋ ಅಥವಾ ದುಡ್ಡು ಮಾಡುವ ದಂಧೆಯೋ ಅನ್ನೋ ಅನುಮಾನ ಕಾಡುತ್ತಿದೆ.

- Advertisement -

Latest News

error: Content is protected !!