Friday, March 29, 2024
Homeಇತರನಿಖಿಲ್​-ರೇವತಿ ದಂಪತಿಗೆ ಗಂಡು ಮಗು ಜನನ...! ದೇವೇಗೌಡರ ಕುಟುಂಬದಲ್ಲಿ ಸಂಭ್ರಮ...!

ನಿಖಿಲ್​-ರೇವತಿ ದಂಪತಿಗೆ ಗಂಡು ಮಗು ಜನನ…! ದೇವೇಗೌಡರ ಕುಟುಂಬದಲ್ಲಿ ಸಂಭ್ರಮ…!

spot_img
- Advertisement -
- Advertisement -

ನಟ ನಿಖಿಲ್​ ಕುಮಾರಸ್ವಾಮಿ- ರೇವತಿ ದಂಪತಿಗೆ ಗಂಡು ಮಗು ಜನಿಸಿದ್ದು, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಮಗು ಜನಿಸಿರುವ ವಿಚಾರವನ್ನು ಜೆಡಿಎಸ್​ ಮುಖಂಡ ಶರವಣನ್​ ಅವರು ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೀಯುತ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿರವರಿಗೆ ಗಂಡು ಮಗು ಜನನವಾಗಿದೆ. ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಮರಿ-ಮೊಮ್ಮಗ ಆಗಮನ ಅತ್ಯಂತ ಸಂತೋಷ ತಂದಿರುವಂತಹ ವಿಷಯ. ಶಿರಡಿ ಸಾಯಿಬಾಬನ ಅನುಗ್ರಹ ಮಗುವ ಮೇಲಿರಲೆಂದು ಆಶಿಸುತ್ತೇನೆಂದು ಟ್ವೀಟ್​ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನನವಾಗಿದೆ. ಸೆಪ್ಟೆಂಬರ್​ 13ರಂದು ರೇವತಿ ಅವರಿಗೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಶುಭ ಶುಕ್ರವಾರದಂದೇ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕುಟುಂಬಕ್ಕೆ ವಾರಸ್ದಾರನ ಆಗಮನವಾಗಿರುವುದು ಸಂತಸ ಇಮ್ಮಡಿಗೊಂಡಿದೆ.

- Advertisement -
spot_img

Latest News

error: Content is protected !!