Thursday, May 2, 2024
Homeಚಿಕ್ಕಮಗಳೂರುಚಿಕ್ಕಮಗಳೂರು; ಕಾರ್ಯಕ್ಕೆ ಹಣ ಕೊಂಡೊಯ್ಯುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್; ಪೊಲೀಸರಿಂದ ಹಣ ಸೀಝ್ ಆರೋಪ

ಚಿಕ್ಕಮಗಳೂರು; ಕಾರ್ಯಕ್ಕೆ ಹಣ ಕೊಂಡೊಯ್ಯುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್; ಪೊಲೀಸರಿಂದ ಹಣ ಸೀಝ್ ಆರೋಪ

spot_img
- Advertisement -
- Advertisement -

ಮೂಡಿಗೆರೆ: ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿದ್ದು, ಈ ಬೆನ್ನಲ್ಲೇ ದೇವತಾ ಕಾರ್ಯಕ್ಕೆ ಹಣ ಕೊಂಡೊಯ್ಯುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗವೊಂದು ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ದೇವತಾ ಕಾರ್ಯಕ್ಕೆಂದು ಕೊಂಡೊಯ್ಯುತ್ತಿದ್ದ 85 ಸಾವಿರ ಹಣವನ್ನು ವಶಪಡಿಕೊಂಡಿದ್ದಾರೆ. ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆದ ಉಡುಪಿ ನಿವಾಸಿ ಪಿ.ಎಸ್ ಆಚಾರ್ಯ ಬ್ಯಾಂಕ್ ನಿಂದ ಹಣ ಡ್ರಾ ಮಾಡಿರುವ ದಾಖಲೆ ತೋರಿಸಿದರು ಕೂಡ ಎಫ್.ಎಸ್.ಟಿ ಹಾಗೂ ಬಣಕಲ್ ಪೊಲೀಸರ ನೇತೃತ್ವದಲ್ಲಿ ಹಣ ಸೀಜ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನೀತಿ ಸಂಹಿತೆ ಜಾರಿಯಲ್ಲಿದ್ದು, ತಾಲೂಕಿನ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದರೆ ಈ ನಿಯಮವೇ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಚುನಾವಣಾ ಅಧಿಕಾರಿಗಳ ಧೋರಣೆಯಿಂದ ಸಾರ್ವಜನಿಕರು ಪರದಾಟ ಅನುಭವಿಸುವಂತಾಗಿದೆ.

- Advertisement -
spot_img

Latest News

error: Content is protected !!