Monday, July 1, 2024
Homeಕರಾವಳಿಮಂಗಳೂರುಕರ್ನಾಟಕ ನೀಟ್ ನಿಂದ ಹೊರಬರಲು ಒತ್ತಾಯಿಸಿ ವಿಧಾನ ಪರಿಷತ್ ನಲ್ಲಿ ನಿರ್ಣಯ ಮಂಡನೆ; ಮಂಗಳೂರಿನಲ್ಲಿ ಎಂಎಲ್ಸಿ...

ಕರ್ನಾಟಕ ನೀಟ್ ನಿಂದ ಹೊರಬರಲು ಒತ್ತಾಯಿಸಿ ವಿಧಾನ ಪರಿಷತ್ ನಲ್ಲಿ ನಿರ್ಣಯ ಮಂಡನೆ; ಮಂಗಳೂರಿನಲ್ಲಿ ಎಂಎಲ್ಸಿ ಐವಾನ್ ಡಿಸೋಜ ಹೇಳಿಕೆ

spot_img
- Advertisement -
- Advertisement -

ಮಂಗಳೂರು: ನೀಟ್ ಪರೀಕ್ಷೆಯಲ್ಲಿ ಹಗರಣದ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳ ರೀತಿ ಕರ್ನಾಟಕವೂ ನೀಟ್ ನಿಂದ ಹೊರಬರುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಕೂಡಾ ನೀಟ್ ಪರೀಕ್ಷೆಯಿಂದ ಹೊರಬರಲು ತೀರ್ಮಾನ ಕೈಗೊಳ್ಳಬೇಕೆಂಬ ನಿರ್ಣಯವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಐವಾನ್ ಡಿಸೋಜ ತಿಳಿಸಿದ್ದಾರೆ.

ನಮ್ಮ ವಿದ್ಯಾರ್ಥಿಗಳ ಸೀಟ್ ಅನ್ನು ಇನ್ನೊಬ್ಬರಿಗೆ ಕೊಡಲು ನಮಗೆ ಮನಸ್ಸಿಲ್ಲ ಎಂದು ಹೇಳಿರುವ ಐವಾನ್ ಡಿಸೋಜ,
ಈ ಬಗ್ಗೆ ವಿಧಾನಪರಿಷತ್ ನಲ್ಲಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.

ತಮಿಳುನಾಡಿನಂತೆ ಕೇರಳವೂ ನೀಟ್ ನಿಂದ ಹೊರಬರುತ್ತಿದ್ದು,
ಹೊಣೆಗಾರಿಕೆ ಇಲ್ಲದ ಕೇಂದ್ರ ಸರ್ಕಾರ ಸಂಪೂರ್ಣ ವೈಫಲ್ಯವಾಗಿದೆ ಎಂದೂ ಐವಾನ್ ಡಿಸೋಜ ಟೀಕಿಸಿದ್ದಾರೆ.

- Advertisement -
spot_img

Latest News

error: Content is protected !!