ಚಾರ್ಮಾಡಿ : ಮಾರ್ಚ್ 18(ನಾಳೆ) ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಸಹಕಾರದೊಂದಿಗೆ ದೇವರ ಸನ್ನಿಧಿಯಲ್ಲಿ ಶ್ರೀನಿವಾಸ್ ಉಪಾಧ್ಯಾಯರವರ ನೇತೃತ್ವದಲ್ಲಿ ಗೋಮಾತೆಯ ಸಂರಕ್ಷಣೆ, ಲೋಕಕಲ್ಯಾಣಕ್ಕಾಗಿ 50 ಕ್ಕೂ ಹೆಚ್ಚು ಪುರೋಹಿತರಿಂದ 1008 ತೆಂಗಿನಕಾಯಿ ಗಣಹೋಮ, ಗಣಪತಿ ದೇವರಿಗೆ ಸಹಸ್ರ ನಾಳಿಕೇರ ಯಾಗ, ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮದೊಂದಿಗೆ ಬೆಳಗ್ಗೆ 6.00 ಗಂಟೆಗೆ ಯಾಗ ಪ್ರಾರಂಭಗೊಂಡು, ಪೂರ್ವಾಹ್ನ 11.00 ಗಂಟೆಗೆ ಪೂರ್ಣಹುತಿ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಬೆಳ್ತಿಗೆ ಅಕ್ಕಿ, ಹಿಂಗಾರ,ತೆಂಗಿನಕಾಯಿ, ಅಡಿಕೆ, ದೇಸಿ ತುಪ್ಪ, ಬೆಲ್ಲ, ಬಾಳೆ ಎಲೆ ಕೃತಜ್ಞಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ಸಮಿತಿಯವರು ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.