- Advertisement -


- Advertisement -
ಬೆಂಗಳೂರು: ರಾಜ್ಯದಲ್ಲಿ ಎರಡು ವಿಧಾನಸಭಾ ಉಪಚುನಾವಣೆ ಹಾಗೂ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮತದಾನದ ಪ್ರಮಾಣವನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮತದಾನ ನಡೆದಿದೆ. ಅಸ್ಸಾಂನಲ್ಲಿ ಶೇಕಡಾ 85.38 ರಷ್ಟು ಮತ್ತು ಪುದುಚೇರಿಯಲ್ಲಿ ಶೇಕಡಾ 89.83 ರಷ್ಟು ಮತದಾನವಾಗಿದೆ.
ಕೇರಳಂ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶೇಕಡಾ 78.03 ರಷ್ಟು ಮತದಾನ ನಡೆದಿದೆ.
ಇನ್ನು ಕರ್ನಾಟಕದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶೇಕಡಾ 68.74 ರಷ್ಟು ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶೇಕಡಾ 68.43 ರಷ್ಟು ಮತದಾನ ನಡೆದಿದೆ.
ಮೂರು ರಾಜ್ಯಗಳ ಮತ್ತು ರಾಜ್ಯ ಎರಡು ಉಪಚುನಾವಣೆಗಳ ಫಲಿತಾಂಶ ಮೇ 4 ರಂದು ಪ್ರಕಟವಾಗಲಿದೆ.
- Advertisement -


