- Advertisement -
![]()
- Advertisement -
ಬೆಂಗಳೂರು: ಕೊನೆಗೂ ಆರ್ ಸಿ ಬಿ ಅಭಿಮಾನಿಗಳ ಕನಸನ್ನು RCB ಗರ್ಲ್ಸ್ ಈಡೇರಿಸಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ
ಆರ್ ಸಿ ಬಿ ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ ವಿರುದ್ಧದ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ್ದ ಡಿಸಿ, 18.3 ಓವರ್ ಗಳಲ್ಲಿ ಸರ್ವಪತನದೊಂದಿಗೆ 114 ರನ್ ಗಳ ಗುರಿ ನೀಡಿತ್ತು.
ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ ಮುಗ್ಗರಿಸಿದೆ. 18.2 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕರಾದ ಶೆಫಾಲಿ 44 ರನ್ ಮತ್ತು ಲ್ಯಾನಿಂಗ್ 23 ರನ್ ಗಳಿಸಿ ಉಳಿದ ಬ್ಯಾಟ್ಸ್ ಮನ್‌ಗಳು ವಿಫಲರಾದರು. ಆರ್‌ಸಿಬಿ ಬೌಲರ್‌ಗಳ ಪೈಕಿ ಶ್ರೇಯಾಂಕಾ ಪಾಟೀಲ್ 4 ಮತ್ತು ಸೋಫಿ 3 ವಿಕೆಟ್ ಪಡೆದರು.ಆ ಮೂಲಕ ವಿನ್ನರ್ ಗಳಾಗಿ ಕಪ್ ನಮ್ದೇ ಎಂದಿದ್ದಾರೆ.
- Advertisement -


