Friday, May 3, 2024
Homeಉದ್ಯಮBIG BREAKING: ಇನ್ನು 3 ತಿಂಗಳು ಸಾಲದ EMI ಕಟ್ಟಬೇಕಾಗಿಲ್ಲ- ಆರ್ ಬಿಐ

BIG BREAKING: ಇನ್ನು 3 ತಿಂಗಳು ಸಾಲದ EMI ಕಟ್ಟಬೇಕಾಗಿಲ್ಲ- ಆರ್ ಬಿಐ

spot_img
- Advertisement -
- Advertisement -

ಮುಂಬೈ: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಹಲವು ಕ್ರಮಗಳನ್ನು ಪ್ರಕಟಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಮತ್ತೆ ಸಾಲದ ಮೇಲೆ ಇಎಂಐ ಪಾವತಿದಾರರಿಗೆ ಕೊಂಚ ನಿಟ್ಟುಸಿರು ಬಿಡುವ ಸಿಹಿ ಸುದ್ದಿ ನೀಡಿದೆ.

ಸಾಲದ ಇಎಂಐ ಮರು ಪಾವತಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದೆ.ಕಳೆದ ಮಾರ್ಚ್ ನಲ್ಲಿ ಇಎಂಐ ಪಾವತಿಯನ್ನು ಮೂರು ತಿಂಗಳಿಗೆ ಅಂದರೆ ಜೂನ್ 1ಕ್ಕೆ ವಿಸ್ತರಿಸಿದ್ದ ಆರ್ ಬಿಐ ಇದೀಗ ಆಗಸ್ಟ್ 31ರವರೆಗೆ ವಿಸ್ತರಿಸಿದೆ.

ಭಾರತ ಲಾಕ್ ಡೌನ್ 4.0ರ ನಡುವೆ ಮಧ್ಯಮ ವರ್ಗಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಟಾನಿಕ್ ನೀಡಿದೆ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.

- Advertisement -
spot_img

Latest News

error: Content is protected !!