ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವವನ್ನು ತಡವಾಗಿ ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ನಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಜಗತ್ತಿಗೆ ನನ್ನನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಮತ್ತು ಜನ್ಮ ಕೊಟ್ಟಿದ್ದಕ್ಕೆ ಧನ್ಯವಾದಗಳು. ಇವತ್ತು ನಾನು ಈ ಮಟ್ಟದಲ್ಲಿ ಇದ್ದೇನೆ ಅಂದರೆ, ಅದಕ್ಕೆ ನೀವೇ ಕಾರಣ. ಸದಾ ನಾನು ನಿಮಗೆ ಋಣಿಯಾಗಿರುವೆ’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಡವಾಗಿ ವಿಶ್ ಮಾಡಿದ ಕುರಿತು ಬರೆದುಕೊಂಡಿದ್ದಾರೆ.
ಈ ಕುರಿತು ಕೆಲವರು ಪ್ರತಿಕ್ರಿಯಿಸಿದ್ದು, ಪುಣ್ಯಕ್ಕೆ ತಡವಾದರೂ ವಿಶ್ ಮಾಡಿದ್ದೀರಲ್ಲ ಗ್ರೇಟ್ ಎಂದು ಕಾಮೆಂಟ್ ಬರೆದಿದ್ದರೆ, ಇನ್ನೂ ಕೆಲವರು ಮರೆತಿದ್ದರೆ ಇನ್ನೂ ಅನಾಹುತ ಆಗಿರುವುದು ಎಂದು ಎಚ್ಚರಿಸಿದ್ದಾರೆ. ತಂದೆ ತಾಯಿಯನ್ನೇ ಮರೆತಿರುವುದರಿಂದ ಈ ಹಿಂದಿನ ಎಲ್ಲಾ ಆವಾಂತರಗಳನ್ನು ಕ್ಷಮಿಸಲಾಗುವುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ಏನೇ ಮಾಡಿದರೂ ಸುದ್ದಿ ಆಗುತ್ತಾರೆ. ಈ ಬಾರಿ ಅಪ್ಪ ಅಮ್ಮನಿಗೆ ಅಭಿಮಾನದ ಸಂದೇಶ ಕಳುಹಿಸಿ ಸುದ್ದಿಯಾಗಿದ್ದಾರೆ.


