Saturday, June 6, 2026
Homeತಾಜಾ ಸುದ್ದಿಇದೆಂಥಾ ಹುಚ್ಚು ಅಭಿಮಾನ ನೋಡಿ: ರಶ್ಮಿಕಾ ಮಂದಣ್ಣರನ್ನು ನೋಡೋದಕ್ಕೆ ಹೈದರಾಬಾದ್ ನಿಂದ ಮಡಿಕೇರಿಗೆ ಬಂದ...

ಇದೆಂಥಾ ಹುಚ್ಚು ಅಭಿಮಾನ ನೋಡಿ: ರಶ್ಮಿಕಾ ಮಂದಣ್ಣರನ್ನು ನೋಡೋದಕ್ಕೆ ಹೈದರಾಬಾದ್ ನಿಂದ ಮಡಿಕೇರಿಗೆ ಬಂದ ಅಭಿಮಾನಿ

- Advertisement -
- Advertisement -

ಮಡಿಕೇರಿ: ತಮ್ಮ ನೆಚ್ಚಿನ ತಾರೆಯರ ಮೇಲೆ ಕೆಲವರಿಗೆ ಎಷ್ಟು ಹುಚ್ಚು ಅಭಿಮಾನವಿರುತ್ತದೆ ಎಂಬುವುದಕ್ಕೆ ಈ ವ್ಯಕ್ತಿ ಬೆಸ್ಟ್ ಎಕ್ಸಾಂಪಲ್.  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಬಂದ ಅಭಿಮಾನಿಯೊಬ್ಬ ಇಕ್ಕಟ್ಟಿಗೆ ಸಿಲುಕಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಆಕಾಶ್‌ ತ್ರಿಪಾಠಿ ರಶ್ಮಿಕಾ ಅವರ ಅಭಿಮಾನಿಯಾಗಿದ್ದು, ತನ್ನ ನೆಚ್ಚಿ ನಟಿಯನ್ನು ನೋಡಲು ಕೊಡಗಿನ ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮಕ್ಕೆ ಬಂದಿದ್ದಾನೆ.

ಮೈಸೂರಿನವರೆಗೆ ರೈಲಿನಲ್ಲಿ ಬಂದಿರುವ ಆಕಾಶ್‌ ನಂತರ ವಿರಾಜಪೇಟೆಗೆ ಗೂಡ್ಸ್‌ ಆಟೋದಲ್ಲಿ ವಿರಾಜಪೇಟೆಗೆ ತಲುಪಿದ್ದಾರೆ. ಅಲ್ಲಿಂದ ವಿರಾಜಪೇಟೆ ನಗರದಿಂದ ಗೂಗಲ್‌ ಮ್ಯಾಪ್‌ ಹಾಕಿಕೊಂಡು ಮಗ್ಗುಲ ಗ್ರಾಮದಲ್ಲಿ ಮಂದಣ್ಣ ಎಂಬುವವರಿಗೆ ಸೇರಿದ ಜಾಗ ಇದ್ದು, ಇಲ್ಲೇ ರಶ್ಮಿಕಾ ಮಂದಣ್ಣ ಅವರ ಮನೆ ಇರಬೇಕು ಎಂದು ಆಟೋದಲ್ಲಿ ಗ್ರಾಮಕ್ಕೆ ಬಂದಿಳಿದಿದ್ದಾರೆ. ಬಳಿಕ ಅಲ್ಲಿದ್ದ ಜನರ ಬಳಿ ರಶ್ಮಿಕಾ ಮಂದಣ್ಣ ಮನೆ ಎಲ್ಲಿ ಎಂದು ಹುಡುಕಾಟ ಶುರು ಮಾಡಿದ್ದಾರೆ.

ಈತನ ನಡವಳಿಕೆಯನ್ನು ಗಮನಿಸಿದ ಮಗ್ಗುಲ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಆತನನ್ನು ವಿಚಾರಿಸಿದ್ದು, ಈ ವೇಳೆ ಆತ ಇಂಗ್ಲೀಷ್‌ನಲ್ಲಿ ಮಾತನಾಡಿದ್ದಾನೆ. ನಾನು ರಶ್ಮಿಕಾ ಮಂದಣ್ಣ ಅವರನ್ನು ಈಗಲೇ ಭೇಟಿಯಾಗಬೇಕು. ನಾನು ಅವರ ಅಪ್ಪಟ ಅಭಿಮಾನಿ ಎಂದಿದ್ದಾರೆ ಎನ್ನಲಾಗಿದೆ. ಕೊರೊನಾ ಸಂದರ್ಭ ಹೀಗೆಲ್ಲಾ ಬರಬಾರದು ಎಂದು ಎಚ್ಚರಿಕೆ ನೀಡಿರುವ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಆತನನ್ನು ಪುನಃ ತೆಲಂಗಾಣಕ್ಕೆ ಕಳುಹಿಸಿದ್ದಾರೆ.

- Advertisement -

Latest News

error: Content is protected !!