Wednesday, May 15, 2024
Homeಕರಾವಳಿಸುಳ್ಯದಲ್ಲಿ ಅಪರೂಪದ ಹಾರುವ ಅಳಿಲು ಪತ್ತೆ

ಸುಳ್ಯದಲ್ಲಿ ಅಪರೂಪದ ಹಾರುವ ಅಳಿಲು ಪತ್ತೆ

spot_img
- Advertisement -
- Advertisement -

ಮಂಗಳೂರು: ಸುಳ್ಯ ತಾಲೂಕಿನಲ್ಲಿ ಅಪರೂಪದ ಟ್ರ್ಯಾವನ್‌ಕೋರ್ ಹಾರುವ ಅಳಿಲು ಪತ್ತೆಯಾಗಿದೆ. ಪರಿಸರ ಸಂರಕ್ಷಕ ದೀಪಕ್‌ ಸುಳ್ಯ ಅವರು  ತಮ್ಮ ತೋಟದಲ್ಲಿ ಈ ಅಳಿಲು ಕಂಡು, ಚಿತ್ರ ಕ್ಲಿಕ್ಕಿಸಿದ್ದರು. ನಿಸರ್ಗ ಕನ್ಸರ್ವೇಷನ್‌ ಟ್ರಸ್ಟ್‌ನ ನಾಗರಾಜ್ ಬೆಳ್ಳೂರು ಅವರು, ಇದು ಚಿಕ್ಕ ಹಾರುವ ಅಳಿಲು ಎಂಬುದನ್ನು ಖಚಿತಪಡಿಸಿದ್ದಾರೆ. ಸ್ಥಳೀಯವಾಗಿ ಇದನ್ನು ‘ದರಗು ಪಾಂಜ, ಚಿಕ್ಕ ಪಾಂಜ್‌’ ಎಂದು ಕರೆಯುತ್ತಾರೆ. ಇವು ನಿಶಾಚರಿ ಆಗಿರುವುದರಿಂದ ಕಾಣಸಿಗುವುದು ಅಪರೂಪ.

‘ಪಶ್ಚಿಮಘಟ್ಟದಲ್ಲಿರುವ ಟ್ರ್ಯಾವನ್‌ ಕೋರ್ ಹಾರುವ ಅಳಿಲು ಪ್ರಸ್ತುತ ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಹಾರುವ ಅಳಿಲು ಜಾತಿಗಳಲ್ಲಿ ಒಂದಾಗಿದೆ. ಇದು ಕೇವಲ 32 ಸೆಂ.ಮೀ ಉದ್ದ ಇರುತ್ತದೆ. ದಕ್ಷಿಣ ಭಾರತದಲ್ಲಿ ಅಪರೂಪದ ಅಳಿಲು ಜಾತಿಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ದೈತ್ಯ ಹಾರುವ ಅಳಿಲು (ಇಂಡಿಯನ್ ಜೈಂಟ್) ಮತ್ತು ಟ್ರ್ಯಾವನ್‌ಕೋರ್ ಹಾರುವ ಅಳಿಲು ಎಂಬ ಎರಡು ಜಾತಿಗಳಿವೆ. ಒಂದು ಕಾಲದಲ್ಲಿ ನಾಶವಾಗಿವೆ ಎಂದು ನಂಬಲಾಗಿದ್ದ ಈ ಟ್ರ್ಯಾವನ್‌ಕೋರ್, ನೂರು ವರ್ಷಗಳ ನಂತರ ಕೇರಳದ ಪಶ್ಚಿಮಘಟ್ಟದಲ್ಲಿ ಪತ್ತೆಯಾಗಿತ್ತು’ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!