Sunday, June 28, 2026
Homeಅಪರಾಧಕಾರ್ಕಳ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು!

ಕಾರ್ಕಳ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು!

- Advertisement -
- Advertisement -

ಕಾರ್ಕಳ : ಅಪ್ರಾಪ್ತ ಬಾಲಕಿ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಲ್ಲದೆ ಆಕೆಯವು ಬೆದರಿಸಿ ಹಲ್ಲೆ ಮಾಡಿರುವ ಆರೋಪಿ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಗುರುವಾರ ಪ್ರಕರಣ ದಾಖಲಾಗಿದೆ.

ಕಾರ್ಕಳದ ಬಂಗ್ಲೆಗುಡ್ಡೆ ನಿವಾಸಿ ನಿಯಾಜ್ ವಿರುದ್ದ ದೂರು ದಾಖಲಾಗಿದ್ದು,ದೂರುದಾರರು ಅಪ್ರಾಪ್ತೆಯಾಗಿದ್ದ ಸಮಯದಲ್ಲಿ ಕರೆ ಮಾಡಿ ತಪ್ಪಿ ಕರೆ ಬಂದಿದ್ದಾಗಿ ತಿಳಿಸಿದ್ದ. ಬಳಿಕ ಪದೇ ಪದೇ ಕರೆ ಮಾಡಿ ಸಲುಗೆ ಬೆಳೆಸಿದ್ದ.

ಬಂಗ್ಲೆಗುಡ್ಡೆಯಲ್ಲಿರುವ ತನ್ನ ಮನೆಗೆ ಕಳೆದ ವರ್ಷ ಮೇ. 30 ರಂದು ಯಾರೂ ಇಲ್ಲದ ಸಮಯ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಆ ಬಳಿಕವೂ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದ ಎಂದು ಹೇಳಲಾಗಿದೆ.

ಇದಾದ ಬಳಿಕ ಸೆ. 23 ರಂದು ತನ್ನ ಜೊತೆ ಬರಬೇಕೆಂದು ಬಲವಂತ ಮಾಡಿ ಕಾರ್ಕಳ ಬಸ್ ಸ್ಟಾಂಡ್‌ನಿಂದ ಮೋಟಾರ್ ಸೈಕಲಿನಲ್ಲಿ ಪತ್ತೊಂಜಿಕಟ್ಟೆ ಸಾಮಿಲ್ ಬಳಿ ಕರೆದುಕೊಂಡು ಹೋಗಿ ಕೈಯಿಂದ ಕೆನ್ನೆಗೆ ಹೊಡೆದು ಬ್ಯಾಗಿನಲ್ಲಿದ್ದ ಮೊಬೈಲ್ ಫೋನನ್ನು ಕಸಿದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

- Advertisement -

Latest News

error: Content is protected !!