Sunday, February 16, 2025
Homeಅಪರಾಧಪಾರ್ಟಿಗೆ ತೆರಳಿದ್ದ ಯುವತಿಯ ಮೇಲೆ ಕ್ಯಾಟರಿಂಗ್‌ ಯುವಕನಿಂದ ಅತ್ಯಾಚಾರ: ಆರೋಪಿಗೆ 10 ವರ್ಷ ಕಠಿನ ಕಾರಾಗೃಹ;...

ಪಾರ್ಟಿಗೆ ತೆರಳಿದ್ದ ಯುವತಿಯ ಮೇಲೆ ಕ್ಯಾಟರಿಂಗ್‌ ಯುವಕನಿಂದ ಅತ್ಯಾಚಾರ: ಆರೋಪಿಗೆ 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

spot_img
- Advertisement -
- Advertisement -

ಪುತ್ತೂರು: ಯುವತಿಯೊಬ್ಬಳು ಪಾರ್ಟಿಗೆ ಬಂದಿದ್ದ ಸಂಧರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

ಆರೋಪಿಯನ್ನ ಹಂಪನಕಟ್ಟೆ ಲೈಟ್‌ಹೌಸ್‌ ಹಿಲ್‌ ರೋಡ್‌ ನಿವಾಸಿ ಬ್ರಯಾನ್‌ ರಿಚರ್ಡ್‌ ಅಮನ್ನಾ (34)ಎನ್ನಲಾಗಿದೆ.

ಆರೋಪಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿನ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ.

ಘಟನೆಯ ವಿವರ: ಸಂತ್ರಸ್ತ ಯುವತಿ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿರುವ ಆಕಾಶ್‌ ಕೆ.ಎಸ್‌. ಎಂಬವರಿಗೆ ಸೇರಿದ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇವರಿಗೆ ನೌಕಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಜಾಯ್‌ಲಿನ್‌ ಗ್ಲಾನೆಲ್‌ ಪಿಂಟೋ ಎಂಬವರ ಪರಿಚಯವಾಗಿ ಸ್ನೇಹಿತರಾಗಿದ್ದು, ಅವರಿಗೆ ಅಂಡಮಾನ್‌ ವರ್ಗಾವಣೆ ಆದ ಹಿನ್ನೆಲೆಯಲ್ಲಿ 2021ರ ಫೆ. 5ರಂದು ಸ್ನೇಹಿತರು ಸೇರಿ ಈ ಪಾರ್ಟಿಯನ್ನು ಆಯೋಜಿಸಿದ್ದರು. ಪಾರ್ಟಿಗೆ ಕ್ಯಾಟರಿಂಗ್‌ ವ್ಯವಸ್ಥೆ ಮಾಡಿದ್ದ ಬ್ರಯಾನ್‌ ಅಮನ್ನಾ ಯುವತಿಗೆ ತನ್ನನ್ನು ತಾನು ಜಾಯಿಲಿನ್‌ನ ಸ್ನೇಹಿತ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆಕೆಗೆ ವೈನ್‌ಗೆ ಮತ್ತು ಬರಿಸುವ ಅಮಲು ಪದಾರ್ಥವನ್ನು ಮಿಶ್ರ ಮಾಡಿ ಒತ್ತಾಯದಿಂದ ನೀಡಿದ್ದ. ಜಾಯಿಲಿನ್‌ ಮತ್ತು ಅವರ ಸ್ನೇಹಿತ ರೆಬೆಕಾ ಅವರು ಯುವತಿಗೆ ರಾತ್ರಿ ಉಳಿದುಕೊಳ್ಳಲು ಕೊಠಡಿ ತೋರಿಸಿದ್ದು, ಮೂವರೂ ಅಲ್ಲಿ ಸ್ವಲ್ಪ ಹೊತ್ತು ಮಾತನಾಡಿಸಿಕೊಂಡಿದ್ದರು. ಬಳಿಕ ಯುವತಿ ನಿದ್ದೆ ಮಾಡಿದ್ದು, ಮುಂಜಾನೆ 2 ಗಂಟೆ ವೇಳೆಗೆ ಎಚ್ಚರವಾಗಿ ನೋಡಿದಾಗ ಜಾಯಿಲಿನ್‌ ಮತ್ತು ರೆಬೆಕಾ ಕೊಠಡಿಯಲ್ಲಿ ಇರಲಿಲ್ಲ. ಮತ್ತೆ ನಿದ್ದೆಗೆ ಜಾರಿದ ಯುವತಿಗೆ 5 ಗಂಟೆ ವೇಳೆ ಎಚ್ಚರವಾಗಿದ್ದು, ಆಗ ಆಕೆಯ ಮೇಲೆ ಬ್ರಯಾನ್‌ ಅಮನ್ನಾ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಯುವತಿ ದೂರಿದ್ದಾಳೆ.

- Advertisement -
spot_img

Latest News

error: Content is protected !!