Monday, May 20, 2024
Homeಕರಾವಳಿಸುಬ್ರಮಣ್ಯ: ಟೀ ಕೊಡುವಾಗ ಹೋಟೆಲ್ ಮಾಲಕಿಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನ : ಆರೋಪಿಯ ಬಂಧನ

ಸುಬ್ರಮಣ್ಯ: ಟೀ ಕೊಡುವಾಗ ಹೋಟೆಲ್ ಮಾಲಕಿಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನ : ಆರೋಪಿಯ ಬಂಧನ

spot_img
- Advertisement -
- Advertisement -

ಸುಬ್ರಹ್ಮಣ್ಯ:  ಹೊಟೇಲೊಂದರ ಮಾಲಕಿಯ ಮೇಲೆ ಕಟ್ಟಡ ಮಾಲೀಕ ಮಾನಭಂಗಕ್ಕೆ ಯತ್ನಿಸಿ ಮತ್ತು ಜೀವ ಬೆದರಿಕೆ ಹಾಕಿದ ಘಟನೆ ಕೊಲ್ಲಮೊಗ್ರದಲ್ಲಿ ನಡೆದಿದೆ.

ಕೊಲ್ಲಮೊಗ್ರದ ಟಿ. ಎಂ ಮೊಹಮ್ಮದ್ ಎಂಬವರ ಕಟ್ಟಡದಲ್ಲಿ ಮಹಿಳೆಯೊಬ್ಬರು ಹೊಟೇಲ್ ನಡೆಸುತ್ತಿದ್ದು ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಮಹಮ್ಮದ್ ಬಂದು ಚಹಾ ಕೇಳಿದ್ದಾರೆ. ಚಹಾ ಕೊಡುವಾಗ ಕೈ ಹಿಡಿದೆಳೆದಿದ್ದು ಮಾನ ಭಂಗಕ್ಕೆ ಯತ್ನಿಸಿರುವುದಾಗಿ ಹೋಟೆಲ್ ಮಾಲಕಿ ಮಹಮ್ಮದ್ ವಿರುದ್ಧದ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಜೀವ ಬೆದರಿಕೆ ಒಡ್ಡಿರುವುದಾಗಿ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಮಹಮ್ಮದ್ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

- Advertisement -
spot_img

Latest News

error: Content is protected !!