Wednesday, September 2, 2026
Homeತಾಜಾ ಸುದ್ದಿರಾಣಾ ದಗ್ಗುಬಾಟಿ ಮನಗೆದ್ದ ಚೆಲುವೆ ಯಾರು ಗೊತ್ತಾ.?

ರಾಣಾ ದಗ್ಗುಬಾಟಿ ಮನಗೆದ್ದ ಚೆಲುವೆ ಯಾರು ಗೊತ್ತಾ.?

- Advertisement -
- Advertisement -

ಬಾಹುಬಲಿ ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿಗಳಿಸಿದ ನಟ ರಾಣಾ ದಗ್ಗುಬಾಟಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇಷ್ಟರವರೆಗೆ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಬಿಟ್ಟುಕೊಡದ ರಾಣಾ ಇದೀಗ ತಮ್ಮ ಪ್ರೇಯಸಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಾಣಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಿಹೀಕಾ ಬಜಾಜ್ ಅವರೊಂದಿಗಿನ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಜೊತೆಗೆ ‘ಆಕೆ ಒಪ್ಪಿದ್ದಾಳೆ‘ ಎಂದು ಕ್ಯಾಪ್ಷನ್ ಬರೆದಿದ್ದಾರೆ.

ಇದನ್ನು ಸ್ವತಃ ರಾಣಾ ದಗ್ಗುಬಾಟಿ ಅವರೇ ಖಚಿತಪಡಿಸಿದ್ದಾರೆ. ಟ್ವಿಟರ್ ನಲ್ಲಿ ತಮ್ಮ ಗೆಳತಿ ಒಪ್ಪಿಕೊಂಡ ಬಗ್ಗೆ ಹೇಳಿ ಫೋಟೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಮಿಹೇಕಾ ಬಜಾಜ್ ಜನಪ್ರಿಯ ಫ್ಯಾಷನ್ ಡಿಸೈನರ್ ಆಗಿದ್ದು, ಹೈದರಾಬಾದ್ ನಲ್ಲಿ ಜನಪ್ರಿಯ ಸ್ಟುಡಿಯೋ ಹೊಂದಿದ್ದಾರೆ. ಈ ಮೊದಲು ನಟಿ ತ್ರಿಶಾ ಕೃಷ್ಣನ್ ಜೊತೆಗೆ ಗೆಳೆತನ ಹೊಂದಿದ್ದ ರಾಣಾ ದಗ್ಗುಬಾಟಿ ದೂರವಾಗಿದ್ದರು.

- Advertisement -

Latest News

error: Content is protected !!