Friday, April 4, 2025
Homeಕರಾವಳಿಮಂಗಳೂರುಬೆಳ್ತಂಗಡಿ; ಸರಳಿಕಟ್ಟೆ ಗೈಸ್ ವತಿಯಿಂದ 175 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ.

ಬೆಳ್ತಂಗಡಿ; ಸರಳಿಕಟ್ಟೆ ಗೈಸ್ ವತಿಯಿಂದ 175 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ.

spot_img
- Advertisement -
- Advertisement -

ಬೆಳ್ತಂಗಡಿ; ಸರಳಿಕಟ್ಟೆಯ ಜುಮ್ಮಾ ಮಸೀದಿ ವ್ಯಾಪ್ತಿಯ 175 ಕುಟುಂಬಗಳಿಗೆ ಈ ಬಾರಿಯ ರಂಝಾನ್ ಕಿಟ್ ವಿತರಿಸಲಾಯಿತು.ಸ್ಥಳೀಯ ಜುಮ್ಮಾ ಮಸೀದಿಯ ಖತೀಬ್ ಬಹು. ಅಬ್ದುರ್ರಹೀಂ ಅಝ್ಹರಿ ಸಖಾಫಿಯವರು ದುವಾ ನೆರವೇರಿಸುವ ಮೂಲಕ ಸರಳಿಕಟ್ಟೆ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸರಳಿಕಟ್ಟೆ ಜಮಾಅತ್ ವ್ಯಾಪ್ತಿಯಲ್ಲಿರುವ ಬಡ ಹಾಗೂ ಮಧ್ಯಮ ಕುಟುಂಬಗಳು ಸೇರಿದಂತೆ 175 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸುವ ಮೂಲಕ ಸರಳಿಕಟ್ಟೆ ಗೈಸ್ ಅತ್ಯಂತ ಪುಣ್ಯದ ಮತ್ತು ಗೌರವದ ಕಾರ್ಯವನ್ನು ನೆರವೇರಿಸಿದೆ.

ಸರಳಿಕಟ್ಟೆ ಊರಿನ ಉದ್ಯಮಿಗಳ,ದಾನಿಗಳ ನೆರವಿನಿಂದ ಸರಳಿಕಟ್ಟೆ ಗೈಸ್ ಜಮಾಅತ್ ವ್ಯಾಪ್ತಿಯ ಸದಸ್ಯರ ಚಿಕಿತ್ಸೆಯ ವೆಚ್ಚ, ನಿರ್ಗತಿಕರಿಗೆ ನೆರವು, ಮನೆ ನಿರ್ಮಾಣಕ್ಕೆ ಸಹಾಯ, ಮದುವೆಗೆ ಸಹಾಯಧನ ಸೇರಿದಂತೆ ಹತ್ತಾರು ಸಮಾಜಮುಖಿ‌ ಕಾರ್ಯಗಳನ್ನು ಸದಾ ನಡೆಸುತ್ತಾ ಮುನ್ನಡೆಯುತ್ತಿದೆ.ರಂಝನ್ ಕಿಟ್ 175 ಕುಟುಂಬಗಳ ಮನೆಗಳಿಗೆ ತಲುಪಿಸುವ ಕಾರ್ಯವನ್ನು ಸರಳಿಕಟ್ಟೆ ಗೈಸ್ ಪದಾಧಿಕಾರಗಳೇ ವಾಹನಗಳ ಮೂಲಕ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಹಾಜಿ ಪಿ.ಎಂ. ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಪಿ.ಎಸ್, ಜೊತೆ ಕಾರ್ಯದರ್ಶಿ ಆಸಿಫ್ ಪುಯಿಲ, ಸಮಿತಿ ಸದಸ್ಯರಾದ ಅಬ್ಬಾಸ್ ಮಡಿಕೆರೆಬೆಟ್ಟು, ನಾಸಿರ್ ಎಸ್, ಸಮದ್ ಎಸ್, ಉದ್ಯಮಿಗಳಾದ ಅಶ್ರಫ್ ಬಂಡಾಡ್, ಮುಸ್ತಫಾ ಕಾಜಿನಳಿಕೆ, ಉನೈಸ್ ಚಿಂಗಾಣಿಬೆಟ್ಟು, ನವಾಝ್ ಪಿ.ಎಸ್. ಹೈದರ್ ಗುಂಪಕಲ್ಲು, ಮತ್ತು ಜಮಾಅತಿನ ಸದಸ್ಯರಾದ ಮುಸ್ತಫಾ ಕುರುಬರಪಾಲು, ನೌಮನ್ ಸರಳಿಕಟ್ಟೆ, ಖಾಸಿಂ ಮೇಗಿನಪುಯಿಲ, ಅಬ್ಬಾಸ್ ನೆಲ್ಲಿಪಳಿಕೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!